ಪ್ಯಾರೀಸ್: ಸ್ಪೇನ್, ಫ್ರಾನ್ಸ್ ಮತ್ತು ಪೋರ್ಚುಗಲ್ ದೇಶಗಳಲ್ಲಿ ಭಾರೀ ವಿದ್ಯುತ್ ಕಡಿತದಿಂದಾಗಿ ಲಕ್ಷಾಂತರ ಜನರು ವಿದ್ಯುತ್ ಇಲ್ಲದೆ ಸೋಮವಾರ ಪರದಾಡಿದರು. ಸ್ಪೇನ್ ಮತ್ತು ಪೋರ್ಚುಗಲ್‌ನಾಗರಿಕರು ಮೊಬೈಲ್ ನೆಟ್‌ವರ್ಕ್ಗಳು ಮತ್ತು ದೂರಸಂಪರ್ಕಕ್ಕೂ ಹರಸಾಹಸ ನಡೆಸಿದರು. ಕೆಲವು ಆಸ್ಪತ್ರೆಗಳು ದಿನನಿತ್ಯದ ಕೆಲಸವನ್ನು ಸ್ಥಗಿತಗೊಳಿಸಿವೆ. ಮ್ಯಾಡ್ರಿಡ್‌ನ ಬರಾಜಾಸ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸ್ಪೇನ್ ವಿದ್ಯುತ್ ಕಡಿತದಿಂದ ವಿಮಾನ ಕಾರ್ಯಾಚರಣೆ ಸ್ಥಗಿತಗೊಳಿಸಿದೆ.
ಸ್ಪೇನ್ ಮತ್ತು ಪೋರ್ಚುಗಲ್‌ನಲ್ಲಿ ಭಾರಿ ವಿದ್ಯುತ್ ಕಡಿತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಆದಾಗ್ಯೂ, ಯುರೋಪಿಯನ್ ವಿದ್ಯುತ್ ಗ್ರಿಡ್‌ನ ಸಮಸ್ಯೆಯಿಂದಾಗಿ ಹಲವಾರು ದೇಶಗಳಲ್ಲಿ ರಾಷ್ಟ್ರೀಯ ನೆಟ್‌ವರ್ಕ್ಗಳು ಸ್ಥಗಿತಗೊಂಡಿವೆ. ನೈಋತ್ಯ ಫ್ರಾನ್ಸ್ನ ಅಲಾರಿಕ್ ಪರ್ವತದ ಮೇಲೆ ಬೆಂಕಿ ಕಾಣಿಸಿಕೊಂಡು ಪರ್ಪಿಗ್ನಾನ್ ಮತ್ತು ಪೂರ್ವ ನಾರ್ಬೊನ್ನೆ ನಡುವಿನ ಹೈ-ವೋಲ್ಟೇಜ್‌ನಿಂದ ವಿದ್ಯುತ್ ಕೇಬಲ್‌ಗಳು ಸ್ಥಗಿತವಾಗಿರುವುದೂ ಕಾರಣವಿರಬಹುದು ಜೊತೆಗೆ ಅಧಿಕಾರಿಗಳು ಸಂಭವನೀಯ ಸೈಬರ್ ದಾಳಿಯನ್ನು ತಳ್ಳಿಹಾಕಲಾಗುವುದಿಲ್ಲ ಎಂದೂ ಹೇಳಿದ್ದಾರೆ ಎಂಬುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಐರೋಪ್ಯ ರಾಷ್ಟಗಳಲ್ಲಿ ಈ ರೀತಿಯ ಇಷ್ಟೊಂದು ಪ್ರಮಾಣದ ವಿದ್ಯುತ್ ವ್ಯತ್ಯಯಗಳು ಅತ್ಯಂತ ಅಪರೂಪ, ವಿದ್ಯುತ್ ಸರಬರಾಜು ಯಾವಾಗ ಸಾಮಾನ್ಯ ಸ್ಥಿತಿಗೆ ಬರುತ್ತದೆ ಎಂಬ ಬಗ್ಗೆ ಯಾವುದೇ ಮುನ್ಸೂಚನೆ ಇಲ್ಲ ಎಂದು ಗ್ರಾಹಕರಿಗೆ ತಿಳಿಸಿರುವುದಾಗಿ ಪೋರ್ಚುಗೀಸ್‌ನ ಪ್ರಮುಖ ವಿದ್ಯುತ್ ಕಂಪನಿ ಇಡಿಪಿ ತಿಳಿಸಿದೆ.