2.56 ಲಕ್ಷ ಸರ್ಕಾರಿ ಹುದ್ದೆ ಖಾಲಿ, ನೇಮಕಾತಿಯೇ ಇಲ್ಲ!

0
35

ಹುಬ್ಬಳ್ಳಿ: ನಿರುದ್ಯೋಗ ಸಮಸ್ಯೆ ಯಾವುದೇ ರಾಜ್ಯ, ದೇಶದ ಸಮಸ್ಯೆಯಲ್ಲ. ಇದು ಇಂದು ಜಾಗತಿಕ ಸಮಸ್ಯೆಯಾಗಿ ಪರಿಣಮಿಸಿದೆ. ಸರ್ಕಾರದ ಇಲಾಖೆಗಳಲ್ಲಿ ನೌಕರರು ನಿವೃತ್ತಿಯಾದ ಬಳಿಕ ಹೊಸ ನೇಮಕಾತಿಗಳನ್ನು ಯಾವುದೇ ಸರ್ಕಾರಗಳಾಗಲಿ ಮಾಡಬೇಕು. ಆದರೆ, ಸರ್ಕಾರಗಳು ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ರಾಜ್ಯದಲ್ಲಿ ೨.೫೬ ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇರುವುದು ದುರ್ದೈವದ ಸಂಗತಿ ಎಂದು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಉದ್ಯೋಗ ಮೇಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ, ನಿರುದ್ಯೋಗ ಸಮಸ್ಯೆ ಬಗೆಹರಿಯಲು ಹೊಸ ಹೊಸ ಉದ್ಯಮಗಳು ಸ್ಥಾಪನೆಯಾಗಬೇಕು. ಕೇಂದ್ರ ಸರ್ಕಾರದಿಂದಾಗಲಿ ರಾಜ್ಯ ಸರ್ಕಾರದಿಂದಾಗಲಿ ಹೊಸ ಉದ್ಯಮಗಳ ಸ್ಥಾಪನೆಯಾಗುತ್ತಿಲ್ಲ. ಯಾರೇ ಉದ್ಯಮ ಪ್ರಾರಂಭಿಸುವುದಾದರೇ ಬೆಂಗಳೂರನ್ನೇ ಕೇಂದ್ರಿಕರಿಸಿ ಉದ್ಯಮ ಸ್ಥಾಪನೆಗೆ ಮುಂದಾಗುತ್ತಿದ್ದಾರೆ. ಬೇರೆ ಬೇರೆ ಜಿಲ್ಲೆಗಳಲ್ಲೂ ಉದ್ಯಮಗಳು ಸ್ಥಾಪನೆಯಾಗಬೇಕು. ಯುವಕರು ಸರ್ಕಾರಿ ನೌಕರಿಬೇಕು ಎಂಬ ಮನೋಭಾವನೆಯಿಂದ ಹೊರಬಂದು ಸ್ವಯಂ ಉದ್ಯೋಗ ಸ್ಥಾಪನೆಗೆ ಮುಂದಾಗಬೇಕು. ಉದ್ಯೋಗ ಸ್ಥಾಪನೆ ಸರ್ಕಾರ ನೀಡುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಹೀಗಾದಲ್ಲಿ ನಿರುದ್ಯೋಗ ಸಮಸ್ಯೆ ಪರಿಹರಿಸಲು ಸಾಧ್ಯ ಎಂದರು.

Previous articleಕಾಂಗ್ರೆಸ್ ಭಾರತದ ಪರವೋ, ಪಾಕಿಸ್ತಾನದ ಪರವೋ ಸ್ಪಷ್ಟಪಡಿಸಲಿ
Next articleಕ್ರಿಕೆಟ್ ಬೆಟ್ಟಿಂಗ್: ಓರ್ವನ ಬಂಧನ, ಲಕ್ಷಾಂತರ ನಗದು ಹಣ, ಮೊಬೈಲ್ ವಶ