ಕಾಶ್ಮೀರ ಘಟನೆ: ಧರ್ಮಕ್ಕೆ ತಂದು ಹಚ್ಚಬೇಡಿ – ತಿಮ್ಮಾಪೂರ ಶಾಕಿಂಗ್ ಹೇಳಿಕೆ

0
26

ಬಾಗಲಕೋಟೆ:ಕಾಶ್ಮೀರದ ಪೆಹಲ್ಗಾಮ್ ಘಟನೆಯನ್ನು ಧರ್ಮಕ್ಕೆ ತಂದು ಹಚ್ಚುವುದು ಸರಿಯಲ್ಲ, ಅಂಥ ಆತಂಕದ ಸಂದರ್ಭದಲ್ಲಿ ಧರ್ಮ ಕೇಳಿ ಹೊಡೆದಿದ್ದಾರೆಂಬುದರ ಬಗ್ಗೆ ತಮಗೆ ಅನುಮಾನವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಹಲ್ಗಾಮ್ ಘಟನೆಯಲ್ಲಿ ಮುಸ್ಲಿಂ ವ್ಯಕ್ತಿಯೂ ಮೃತಪಟ್ಟಿರುವಾಗ ಅದನ್ನು ಹಿಂದೂ ಹತ್ಯೆ, ಧರ್ಮ‌ಕೇಳಿ ಹೊಡೆದದ್ದಾರೆಂಬಲ್ಲ ರಾಜಕೀಯ ಬಳಕೆಯ ಹುನ್ನಾರವಾಗಬಾರದು. ನನಗೇನೂ ಧರ್ಮ ಕೇಳಿ ಹೊಡೆದಿದ್ದಾರೆಂದು ಅನಿಸುವುದಿಲ್ಲ ಎಂದು ಹೇಳಿದರು.

Previous articleಜನಿವಾರ ಪ್ರಕರಣ: ರಾಜ್ಯ ಸರ್ಕಾರಕ್ಕೆ ನೋಟಿಸ್‌
Next articleಪರೀಕ್ಷಾರ್ಥಿಗಳಿಗೆ ಅನ್ಯಾಯವಾಗದಂತೆ ಕ್ರಮಕ್ಕೆ ಒತ್ತಾಯಿಸಿ ಸಿಎಂಗೆ ಪತ್ರ