ಬೆಂಗಳೂರು: ಅಭಿಮಾನಿಗಳು ಹಲವು ರೀತಿಯಲ್ಲಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಅವರ ಅಭಿಮಾನಿಯೊಬ್ಬ ಹಣ್ಣಿನಲ್ಲಿ ಡಿ. ಕೆ. ಶಿವಕುಮಾರ ಚಿತ್ರವನ್ನು ಮೂಡಿಸಿ ಎಲ್ಲರ ಕಣ್ಮನ ಸೆಳೆದಿದ್ದಾರೆ.
ಈ ಕುರಿತಂತೆ ಸ್ವತ: ಡಿ. ಕೆ. ಶಿವಕುಮಾರ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಈ ಪ್ರೀತಿ, ಅಭಿಮಾನಕ್ಕೆ ಶರಣು, ಕಲ್ಲರಳಿ ಹೂವಾದಾಗ, ಅಭಿಮಾನದಿ ಕಲೆಯಾದಾಗ.. ಇಂದು ಬಾಣಸಿಗ ಅಭಿಮಾನಿಯೊಬ್ಬರು ಕಲ್ಲಂಗಡಿಯಲ್ಲಿ ಕೆತ್ತಿದ ಕಲೆಯು ನನ್ನ ಕಣ್ಮನ ಸೆಳೆಯಿತು ಎಂದಿದ್ದಾರೆ.