ಕರ್ನಾಟಕ ಪ್ರೆಸ್ ಕ್ಲಬ್ ಐಕಾನ್ ಪ್ರಶಸ್ತಿ ಪಡೆದ ಗ್ರಾಮ ಪಂಚಾಯತಿ ಅಧ್ಯಕ್ಷೆ

0
23

ಇಳಕಲ್ : ತಾಲೂಕಿನ ಗೊರಬಾಳ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾರದಾ ಕೃಷ್ಣ ರಾಠೋಡ ಬೆಂಗಳೂರಿನ ಕರ್ನಾಟಕ ಪ್ರೆಸ್ ಕ್ಲಬ್ ಕೊಡುವ ಐಕಾನ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
      ಕರ್ನಾಟಕ ಪಂಚಾಯತಿ ಇಲಾಖೆಯ ವಿಭಾಗದಲ್ಲಿ ಸಾಧನೆ ಮಾಡಿದ ಶಾರದಾ ಅವರನ್ನು ಗುರುತಿಸಿದ ಪ್ರೆಸ್ ಕ್ಲಬ್ ಗುರುವಾರದಂದು ಈ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗಣ್ಯರು ವಿತರಿಸಿದರು.
       ಶಾರದಾ ರಾಠೋಡ ಗೊರಬಾಳ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಸಮಯದಲ್ಲಿಯೂ ತಾವು ಮಾಡುತ್ತಿದ್ದ ಹಣ್ಣುಗಳ ವ್ಯಾಪಾರ ಮುಂದುವರೆಸಿಕೊಂಡು ಹೋಗುತ್ತಿರುವ ಬಗ್ಗೆ ಸಚಿತ್ರ ಲೇಖನವನ್ನು ಸಂಯುಕ್ತ ಕರ್ನಾಟಕದ ಸಿಂಧೂರ ವಿಭಾಗದಲ್ಲಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Previous articleದೇಶ ಒಡೆಯುವ ಕೆಲಸವನ್ನು ಆರ್ ಎಸ್ ಎಸ್ ಮಾಡುತ್ತಿದೆ : ಕಾಶಪ್ಪನವರ ಆರೋಪ
Next articleಏಷ್ಯಾ ಖಂಡದಲ್ಲೇ ಎರಡನೇ ಅತಿದೊಡ್ಡ ಸೂಳೆಕೆರೆ: ಉಪಲೋಕಾಯುಕ್ತ ಬಿ.ವೀರಪ್ಪ ಬೆಳ್ಳಂಬೆಳಗ್ಗೆ ಭೇಟಿ