ವಾಷಿಂಗ್ಟನ್: ಇತ್ತಿಚ್ಚೀಗಷ್ಟೆ ಪುಟಿನ್, ಉಕ್ರೇನ್ ಜೊತೆ ಈಸ್ಟರ್ ಕದನ ವಿರಾಮ ಘೋಷಿಸಿದ ನಂತರವು ಯುರೋಪನಲ್ಲಿ ಸಾಕಷ್ಟು ಬೆಳವಣಿಗೆ ನಡೆಯುತ್ತಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಉಕ್ರೇನ್‌ನ ರಾಜಧಾನಿ ಕೀವ್ ಮೇಲೆ ರಷ್ಯಾ ನಡೆಸುತ್ತಿರುವ ದಾಳಿಯು ಒಂದು ಕೆಟ್ಟ ಸಂದರ್ಭವಾಗಿದ್ದು, ಇದಕ್ಕೆ ಅಸಂತೋಷವನ್ನು ವ್ಯಕ್ತಪಡಿಸಿ ಗುರುವಾರ ಸಾಮಾಜಿಕ ಮಾಧ್ಯಮದಲ್ಲಿ ಖಂಡಿಸಿದ್ದಾರೆ.
ಇತ್ತಿಚಿಗೆ ಕೀವ್ ಮೇಲೆ ನಡೆದ ೧೪೦ ಡ್ರೋನ್ ಮತ್ತು ೭೦ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ ೧೦ ಜನರು ಬಲಿಯಾಗಿದ್ದರು. ಆದರೆ ಯುದ್ದ ನಿಲ್ಲದ ಕಾರಣ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲೆ ಇದೆ. ಈ ಬಗ್ಗೆ ಟ್ರಂಪ್ ನೇರವಾಗಿ ಮೊದಲ ಬಾರಿ ರಷ್ಯಾದ ಅಧ್ಯಕ್ಷ ಪುಟಿನ್ ಅವರೊಂದಿಗೆ ಮಾತನಾಡಿ ಪುಟಿನ್‌ಗೆ ಯುದ್ಧ ನಿಲ್ಲಿಸುವಂತೆ ಕರೆ ನೀಡಿದ್ದಾರೆ. ಎರಡು ಕಡೆ ಸೈನಿಕರು ಸಾಯುತ್ತಿದ್ದಾರೆ. ಎರಡು ದೇಶಗಳೊಂದಿಗೆ ಶಾಂತಿ ಒಪ್ಪಂದ ಮಾಡೋಣ ಎಂದು ಎಚ್ಚರಿಕೆ ನೀಡಿದ್ದಾರೆ.
ದಕ್ಷಿಣ ಆಫ್ರಿಕಾಕ್ಕೆ ಅಲ್ಪಾವಧಿಯ ಭೇಟಿ ನೀಡಿದ ಸಂದರ್ಭದಲ್ಲಿ, ಜೆಲೆನ್‌ಸ್ಕಿ ಕದನ ವಿರಾಮ ಘೋಷಿಸಲು ರಷ್ಯಾದ ಮೇಲೆ ಹೆಚ್ಚಿನ ಒತ್ತಡ ಹೇರಬೇಕು ಎಂದು ಹೇಳಿದ್ದರು. ಆದರೆ ಉಕ್ರೇನ್‌ನ ಕ್ರಿಮಿಯಾದ ಮೇಲೆ ರಷ್ಯಾದ ನಿಯಂತ್ರಣವನ್ನು ಜೆಲೆನ್‌ಸ್ಕಿ ಒಪ್ಪದ ಕಾರಣ ರಷ್ಯಾದೊಂದಿಗಿನ ಶಾಂತಿ ಮಾತುಕತೆಗೆ ಹಾನಿಯಾಗಿದೆ ಎಂದು ಅಮೆರಿಕ ಅಧ್ಯಕ್ಷರು ಆರೋಪಿಸಿದ ಒಂದು ದಿನದ ನಂತರ ಈ ಹೇಳಿಕೆ ಬಂದಿದೆ. ಟ್ರಂಪ್ ಪುಟಿನ್‌ಗೆ ಎಚ್ಚರಿಕೆ ನೀಡಿದ ಹೊರತಾಗಿಯೂ ಇನ್ನೂ ಉಕ್ರೇನ್ ಸಾಕಷ್ಟು ನಷ್ಟವನ್ನು ಅನುಭವಿಸುತ್ತಿದೆ ಎಂದು ರಾಯಿರ‍್ಸ್ ವರದಿ ಮಾಡಿದೆ. ಚೀನಾದಿಂದ ಅಮೆರಿಕಗೆ ಆಮದಾಗುತ್ತಿರುವ ಸರಕುಗಳ ಮೇಲಿನ ಸುಂಕವನ್ನು ಪ್ರಸ್ತುತ ೧೪೫% ರಿಂದ ೫೦% ರಿಂದ ೬೫% ಕ್ಕೆ ಇಳಿಸುವ ಬಗ್ಗೆ ಟ್ರಂಪ್ ಆಡಳಿತ ಪರಿಶೀಲಿಸಲಿದೆ’