ರೆಬಲ್ ಟೀಂ ಸೈಲೆಂಟ್ ಆಗಿಲ್ಲ

ರಮೇಶ ಜಾರಕಿಹೊಳಿ

ಚಿತ್ರದುರ್ಗ: ಬಿಜೆಪಿ ರೆಬಲ್ ಟೀಂ ಸೈಲೆಂಟ್ ಆಗಿದೆ ಎಂಬುದು ಸುಳ್ಳು ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಯತ್ನಾಳ್ ಉಚ್ಛಾಟನೆ ಬಳಿಕ ಸೈಲೆಂಟ್ ಆಗಿಲ್ಲ. ಬದಲಾಗಿ ನಿರಂತರ ಹೋರಾಟ ನಡೆದಿದೆ. ಪ್ರತಿ ವಾರ ಸಭೆಗಳು ನಡೆಯುತ್ತಿವೆ ಎಂದರು. ಯತ್ನಾಳ್ ಉಚ್ಛಾಟನೆ ಮರು ಪರಿಶೀಲಿಸುವಂತೆ, ಪಕ್ಷಕ್ಕೆ ಮರಳಿ ಕರೆದುಕೊಳ್ಳುವಂತೆ ಆಗ್ರಹಿಸಿದ್ದು, ಈಗಾಗಲೇ ಅದೇ ನಿಟ್ಟಿನಲ್ಲಿ ಮುಂದುವರೆದಿದ್ದೇವೆ. ಕೆಲವೇ ದಿನದಲ್ಲಿ ಕೇಂದ್ರದ ನಾಯಕರನ್ನು ಭೇಟಿ ಮಾಡುತ್ತೇವೆ ಎಂದರು.
ಕೇಂದ್ರದ ನಾಯಕರ ಭೇಟಿಗೂ ಮುನ್ನ ಯತ್ನಾಳ್ ಜತೆ ಸಭೆ ನಡೆಸಿ, ಅವರ ಸಲಹೆ ಪಡೆದು ದೆಹಲಿಗೆ ತೆರಳುತ್ತೇವೆ ಎಂದ ಅವರು, ಜನಾಕ್ರೋಶ ಯಾತ್ರೆಯಲ್ಲಿ ನಾನು ಈವರೆಗೆ ಭಾಗವಹಿಸಿಲ್ಲ. ಪಕ್ಷದ ಸಂಘಟನೆ ಯಾರೇ ಮಾಡಿದರು ಒಳ್ಳೆಯ ಕೆಲಸ. ಮುಂದಿನ ದಿನಗಳಲ್ಲಿ ನೋಡೋಣ ಎಂದು ಹೇಳಿದರು.
ಉಗ್ರವಾದಿಗಳು ಈಗ ಮತ್ತೆ ಬಾಲ ಬಿಚ್ಚುತ್ತಿದ್ದಾರೆ. ಇವರ ವಿರುದ್ಧ ಕೇಂದ್ರ ಸರ್ಕಾರ ಉಗ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.