ಅಮಾನತ್ತಾದವರು ಕರ್ತವ್ಯಕ್ಕೆ ಹಾಜರಾಗಬಾರದು

0
27

ಶಿವಮೊಗ್ಗ: ಅಮಾನತ್ತಾದ ಗೃಹ ರಕ್ಷಕ ದಳದ ರಘು ಅವರು ಸೋಮವಾರ ಹಾರ್ನಹಳ್ಳಿಯಲ್ಲಿ ನಡೆದ ಗೃಹ ರಕ್ಷಕ ದಳದ ಪರೇಡ್‌ನಲ್ಲಿ ಭಾಗವಹಿಸಿದ್ದರ ಬಗ್ಗೆ ಜಿಲ್ಲಾಧಿಕಾರಿಯವರು ಪ್ರತಿಕ್ರಿಯಿಸಿದ್ದಾರೆ.
‘ತಮಗೆ ಮಾಹಿತಿ ಇಲ್ಲ. ಅಮಾನತ್ತಾದವರು ಕರ್ತವ್ಯಕ್ಕೆ ಹಾಜರಾಗಬಾರದು. ಜಿಲ್ಲಾಡಳಿತದಿಂದ ಇಲಾಖಾ ತನಿಖೆಗೆ ಆದೇಶ ಮಾಡಿದ್ದೇವೆ. ಅಮಾನತ್ತಾದವರು ಪರೇಡ್‌ನಲ್ಲಿ ಪಾಲ್ಗೊಂಡರೆ ಹೋಮ್ ಗಾರ್ಡ್ಸ್ ಕಮಾಂಡೆಂಟ್ ಅವರು ಕ್ರಮ ಕೈಗೊಳ್ಳಬೇಕು. ಅವರೇನು ಮಾಡುತ್ತಾರೋ ನೋಡೋಣ’ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ‘ಸಂಯುಕ್ತ ಕರ್ನಾಟಕ’ಕ್ಕೆ ತಿಳಿಸಿದರು.

Previous articleವಕ್ಫ್ ಹೆಸರಿನಲ್ಲಿ ಹಿಂದುಗಳ ಮೇಲೆ ದೌರ್ಜನ್ಯ
Next articleಹಿನ್ನೀರಿನಲ್ಲಿ ಮುಳುಗಿ ತಂದೆ-ಮಗ ಸಾವು