ಶಿವಮೊಗ್ಗ: ಸಿಇಟಿ ಪರೀಕ್ಷೆ ವೇಳೆ ಬ್ರಾಹ್ಮಣ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಪ್ರಕರಣ ಇನ್ನೂ ಜೀವಂತವಾಗಿರುವಾಗಲೇ ಸೇವೆಯಿಂದ ಅಮಾನತಾದ ಹೋಂ ಗಾರ್ಡ್ ಕರ್ತವ್ಯಕ್ಕೆ ಹಾಜರಾಗಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸೋಮವಾರ ಹಾರ್ನಹಳ್ಳಿಯಲ್ಲಿ ನಡೆದ ಪರೇಡ್‌ಗೆ ಹೋಂ ಗಾರ್ಡ್ ಡಿ.ರಘು ಹಾಜರಾಗುವ ಮೂಲಕ ಅಮಾನತು ಕಣ್ಣೊರೆಸುವ ತಂತ್ರವಾಗಿದೆಯಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ. ಪರೇಡ್‌ಗೆ ಹಾಜರಾದವರ ಪಟ್ಟಿಯಲ್ಲಿ ಆತನ ಹೆಸರು ಉಲ್ಲೇಖವಾಗಿದೆ. ಸಿಇಟಿ ಪರೀಕ್ಷೆಯ ವೇಳೆ ಆದಿಚುಂಚನಗಿರಿಯಲ್ಲಿ ಕರ್ತವ್ಯದಲ್ಲಿದ್ದ ಹೋಮ್‌ಗಾರ್ಡ್ ಡಿ.ರಘು ವಿದ್ಯಾರ್ಥಿಗಳ ಜನಿವಾರ ತೆಗೆಸಿ ಹಿಂದೂ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದರು. ಕರ್ತವ್ಯ ಲೋಪಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಮೂರು ದಿನಗಳ ಹಿಂದೆ ಇಬ್ಬರನ್ನು ಅಮಾನತುಗೊಳಿಸಿದ್ದರು.
ಹೋಂ ಗಾರ್ಡ್ ಕಮಾಂಡೆಂಟ್ ಡಾ. ಚೇತನ್ ಅವರು ಆರೋಪದ ಹಿನ್ನೆಲೆಯಲ್ಲಿ ಕಲಾವತಿ ಹಾಗೂ ರಘು ಅವರನ್ನು ಇಲಾಖಾ ವಿಚಾರಣೆಗೆ ಒಳಪಟ್ಟು ಏ. 18ರಂದು ಅಮಾನತುಗೊಳಿಸಿದ್ದರು.