ಪುನೀತ್ ಕೆರೆಹಳ್ಳಿಗೆ ಪೊಲೀಸ್ ಘೇರಾವ್

0
24


ಸಂ. ಕ. ಸಮಾಚಾರ, ಮಂಗಳೂರು: ವಿಶ್ವ ಹಿಂದೂ ಪರಿಷತ್ ಬೆಳ್ತಂಗಡಿ ಪ್ರಖಂಡ ವತಿಯಿಂದ ಇಂದು ಸಂಜೆ ೭ ಗಂಟೆಗೆ ಉಜಿರೆ ಶ್ರೀ ಕೃಷ್ಣಾನುಗ್ರಹ ಸಭಾಭವನದಲ್ಲಿ ನಡೆಯಲಿದ್ದ ರಾಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಹಿಂದೂ ಹೋರಾಟಗಾರ, ಗೋ ರಕ್ಷಕ ಪುನೀತ್ ಕೆರೆಹಳ್ಳಿ ಅವರನ್ನು ಬೆಳ್ತಂಗಡಿ ಪೊಲೀಸರು ಉಜಿರೆಯ ಕಾಲೇಜು ರಸ್ತೆಯಲ್ಲಿ ಘೇರಾವ್ ಹಾಕಿ ತಡೆದಿದ್ದಾರೆ.
ದಕ್ಷಿಣ ಕನ್ನಡ ಪ್ರವೇಶ ನಿಷೇಧ ಮಾಡಿದ ಡಿಸಿ ಆದೇಶ ಕೆರೆಹಳ್ಳಿಗೆ ತೋರಿಸಿದ ಬಳಿಕ ವಾಪಸ್ ತೆರಳಿದ್ದಾರೆ.
ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಆಗಮಿಸಿ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮ ವೀಕ್ಷಿಸಲು ಹಿಂದೂ ಪುನೀತ್ ಕೆರೆಹಳ್ಳಿ ಧರ್ಮಸ್ಥಳ ಕಡೆಯಿಂದ ಉಜಿರೆ ಕಡೆ ಕಾರಿನಲ್ಲಿ ತನ್ನ ಸುಮಾರು ೨೦೦ ಬೆಂಬಲಿಗರೊಂದಿಗೆ ಬರುತ್ತಿದ್ದಾಗ ಬೆಳ್ತಂಗಡಿ ಪೊಲೀಸರು ಮನವರಿಕೆ ಮಾಡಿದ್ದಾರೆ. ಈ ವೇಳೆ ಕೆರೆಹಳ್ಳಿ ಹಿಂದಿರುಗುವುದಾಗಿ ಹೇಳಿ ಭರವಸೆ ನೀಡಿದ್ದಾರೆ. ಆದರೆ ಉಜಿರೆಯಲ್ಲಿ ಜನಸ್ತೋಮ ಕಂಡುಬಂದಿದ್ದು, ಪೊಲೀಸ್ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ.

Previous articleಬಪ್ಪನಾಡು ಜಾತ್ರೋತ್ಸವ ಮುರಿದ ರಥದ ಮೇಲ್ಭಾಗ: ತಪ್ಪಿದ ಅನಾಹುತ
Next articleತಿರುವು ಪಡೆದುಕೊಂಡ ಕುತ್ತಾರು ಗ್ಯಾಂಗ್ ರೇಪ್