Home Advertisement
Home ನಮ್ಮ ಜಿಲ್ಲೆ ದಕ್ಷಿಣ ಕನ್ನಡ ಅಪಘಾತ – ತಾಯಿ, ಮಗು ಸಾವು

ಅಪಘಾತ – ತಾಯಿ, ಮಗು ಸಾವು

0
91
Accident

ಮಂಗಳೂರು: ಕಾಸರಗೋಡು ಪರಪ್ಪೆ ಬಳಿ ಮದುವೆ ದಿಬ್ಬಣ ಹೋಗುತ್ತಿದ್ದ ಕಾರೊಂದು ಉರುಳಿದ ಪರಿಣಾಮ ವಾಹನದಲ್ಲಿದ್ದ ಸುಳ್ಯ ಮೂಲದ ತಾಯಿ ಮತ್ತು ಮಗು ಮೃತಪಟ್ಟು, ನಾಲ್ವರು ಗಾಯಗೊಂಡಿರುವ ಘಟನೆ ನಡೆದಿದೆ.
ಸುಳ್ಯದ ನಾವೂರು ಬೋರುಗುಡ್ಡೆ ಅಬ್ದುಲ್ಲಾ ಎಂಬವರ ಪುತ್ರಿ, ಪರಪ್ಪೆಯ ಶಾನ್ ಎಂಬವರ ಪತ್ನಿ ಶಾಹಿನಾ (೨೮) ಹಾಗೂ ೩ ವರ್ಷದ ಮಗು ಶಜಾ ಮೃತಪಟ್ಟಿದ್ದಾರೆ.
ಕಾರಿನಲ್ಲಿದ್ದ ನಾಲ್ವರು ಗಂಭೀರ ಗಾಯಗೊಂಡಿದ್ದು, ಅವರನ್ನು ಕಾಸರಗೋಡು ಆಸ್ಪತ್ರೆಗೆ ಕರೆದೊಯ್ದು ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.

Previous articleದೋಣಿ ಮುಳುಗಡೆ: ೭ ಮಂದಿ ಮೀನುಗಾರರ ರಕ್ಷಣೆ
Next articleಗ್ಯಾಂಗ್‌ ಸ್ಟಾರ್‌ ಪಾತ್ರದಲ್ಲಿ ರವಿ ಪುತ್ರ