ಸರ್ಕಾರದ ಅಧಿಕೃತ ನಿಲುವಿನ ಮುನ್ನ ಜಾತಿ ಗಣತಿ ಚರ್ಚೆ ಅನಗತ್ಯ

ಹಳಿಯಾಳ. ರಾಜ್ಯ ಸರ್ಕಾರ ಜಾತಿ ಗಣತಿಯ ಬಗ್ಗೆ ತನ್ನ ಅಧಿಕೃತ ನಿಲುವನ್ನು ಘೋಷಿಸುವ ಮುನ್ನವೇ ಮಾಧ್ಯಮಗಳಲ್ಲಿ ನಡೆಯುತ್ತಿರುವ ಚರ್ಚೆ, ಊಹಾಪೋಹಗಳು, ಮುಖಂಡರು ವಿಚಾರ ಮಂಡನೆಗಳು ಎಲ್ಲವೂ ವ್ಯರ್ಥ ಹಾಗೂ ಅನಗತ್ಯ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವ ಸಂಪುಟದ ಸಭೆಯ ನಡೆಯಲಿದ್ದು ಈ ಜಾತಿ ಗಣತಿಯ ಬಗ್ಗೆ ಚರ್ಚೆ ನಡೆಯಲಿದೆ, ಸರ್ಕಾರ ತನ್ನ ನಿಲುವನ್ನು ಪ್ರಕಟಿಸಲಿದೆ. ಅದರ ನಂತರ ಬೇಕಾದರೆ ಚರ್ಚೆ ನಡೆಯಲಿ. ವರದಿ ಬಹಿರಂಗಗೊಳ್ಳುವ ಮುನ್ನವೇ ಅನಗತ್ಯವಾದ ಹೇಳಿಕೆ, ಚರ್ಚೆಗಳನ್ನು ನಡೆಸಿ ಸಮಾಜದಲ್ಲಿ ಗೊಂದಲ ಸಂದೇಹಗಳನ್ನು ಸೃಷ್ಟಿಸುವ ಮರ್ಮ ಅರ್ಥವಾಗುತ್ತಿಲ್ಲ ಎಂದರು.