ಡಿಕೆಶಿ ಬಾಲಗಂಗಾಧರನಾಥ ಸ್ವಾಮೀಜಿಗೆ ಬಿಜಿಎಸ್‌ ಎನ್ನುವುದೇಕೆ..?

0
27

ಬೆಂಗಳೂರ: ಮಾನವ ಧರ್ಮಕ್ಕೆ ಜಯವಾಗಲಿ, ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ನಮ್ಮ ಗುರುಗಳೊಬ್ಬರು ಹೇಳಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ ಹೇಳಿದ್ದಾರೆ.
ಅವರು ನಗರದ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ಆದಿಚುಂಚನಗಿರಿ ಮಠದ ಆವರಣದಲ್ಲಿ ದೇವಾಲಯದ ಕುಂಭಾಭಿಷೇಕ ಮಹೋತ್ಸವ ಮತ್ತು ಲೋಕಾರ್ಪಣಾ ಸಮಾರಂಭದಲ್ಲಿ ಪಾಲ್ಗೊಂಡು, ಸಭಾ ಕಾರ್ಯಕ್ರಮದಲ್ಲಿ ಮಾತನಾಡಿ ಮಾನವ ತತ್ವ, ಮಾನವೀಯತೆಯನ್ನು ಕಾಪಾಡಿಕೊಂಡು ನಾವೆಲ್ಲರೂ ಹೋಗಬೇಕಿದೆ. ನಮ್ಮ ಪ್ರಯತ್ನಗಳು ವಿಫಲ ಆಗಬಹುದು; ಆದರೆ ಪ್ರಾರ್ಥನೆ ವಿಫಲ ಆಗಲು ಸಾಧ್ಯವಿಲ್ಲ ಎಂಬುವುದು ನನ್ನ ನಂಬಿಕೆ. ಬಾಲಗಂಗಾಧರನಾಥ ಸ್ವಾಮೀಜಿ ಅವರನ್ನು ನಾವು ಬಿಜಿಎಸ್‌ ಎಂದು ಕರೆಯುತ್ತೇವೆ. ‘ಬಿ‘ ಎಂದರೆ ಭಕ್ತಿ, ‘ಜಿ‘ ಎಂದರೆ ಜ್ಞಾನದ, ‘ಎಸ್‌‘ ಎಂದರೆ ಸಂಗಮ ಎಂದು ನಾನು ಭಾವಿಸಿದ್ದೇನೆ‌ ಎಂದಿದ್ದಾರೆ.

Previous articleಡಿಸೆಂಬರ್‌ನಲ್ಲಿ ೮೮ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ
Next articleಸರ್ಕಾರದ ಅಧಿಕೃತ ನಿಲುವಿನ ಮುನ್ನ ಜಾತಿ ಗಣತಿ ಚರ್ಚೆ ಅನಗತ್ಯ