ಕಂಬನಿಯ ನಡುವೆ ಬಾಲಕಿಯ ಅಂತ್ಯಸಂಸ್ಕಾರ

0
42

ಹುಬ್ಬಳ್ಳಿ: ಬಿಹಾರ ಪಾಟ್ನಾ ಮೂಲದ ದುರುಳ ರಿತೇಶ್‌ಕುಮಾರ್‌ನಿಂದ ಕೊಲೆಯಾದ ೫ ವರ್ಷದ ಬಾಲಕಿಯ ಅಂತ್ಯಕ್ರಿಯೆ ಸೋಮವಾರ ನಗರದ ದೇವಾಂಗಪೇಟೆಯ ರುದ್ರಭೂಮಿಯಲ್ಲಿ ತಂದೆ, ತಾಯಿ ಕುಟುಂಬಸ್ಥರು ಮತ್ತು ನೂರಾರು ಜನರ ಕಂಬನಿಯ ನಡುವೆ ನೆರವೇರಿತು.
ಕುಟುಂಬಸ್ಥರು ವಿಧಿವಿಧಾನಗಳೊಂದಿಗೆ ಕುರುಬ ಸಂಪ್ರದಾಯದಂತೆ ಅಂತ್ಯಕ್ರಿಯೆ ನೆರವೇರಿಸಿದರು.
ತಾಲೂಕಾ ದಂಡಾಧಿಕಾರಿ ಆರ್.ಕೆ.ಪಾಟೀಲ ಸಮ್ಮುಖದಲ್ಲಿ ಕಿಮ್ಸ್ ಆರ್‌ಐ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು, ಕುಟುಂಬಸ್ಥರಿಗೆ ಬಾಲಕಿಯ ಮೃತದೇಹವನ್ನು ಬೆಳಗ್ಗೆ ೧೧.೨೦ ಕ್ಕೆ ಹಸ್ತಾಂತರ ಮಾಡಿದರು.
ನಂತರ ಆ್ಯಂಬುಲೆನ್ಸ್ ಮೂಲಕ ಸಬ್‌ಜೈಲ್ ಹತ್ತಿರದ ಮನೆಗೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಲಾಯಿತು. ದೇವಾಂಗ ಪೇಟೆ ರುದ್ರಭೂಮಿಯಲ್ಲಿ ಮಗಳ ಶವವನ್ನು ಕೈಯಲ್ಲಿ ಹೊತ್ತು ತಂದ ತಂದೆ ಶರಣಪ್ಪ ಕುರಿ ಅಗ್ನಿಸ್ಪರ್ಶ ಮಾಡಿ ಅಂತ್ಯಕ್ರಿಯೆ ನೆರವೇರಿಸಿದರು. ಈ ವೇಳೆ ಪೋಷಕರ ಆಕ್ರಂದನ ಮುಗಿಲು ಮುಟ್ಟಿತು.

Previous articleಬಾಲಕಿಯ ಶವ ಹಸ್ತಾಂತರ
Next articleಪರೀಕ್ಷೆ ಭಯ: 5ನೇ ಮಹಡಿಯಿಂದ ಜಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ