ಕೊಪ್ಪಳ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ನಗರದ ಬ್ರಾಹ್ಮಣ ಸದಾಚಾರ ಸದನದಲ್ಲಿ ಶನಿವಾರ ನಡೆದ ಚುನಾವಣೆಯಲ್ಲಿ ಅಶೋಕ ಹಾರನಹಳ್ಳಿಯವರ ಬಣದ ಗುರುರಾಜ ಜೋಶಿ ಜಯಗಳಿಸಿದ್ದಾರೆ.
ಜಿಲ್ಲೆಯ ಪ್ರತಿನಿಧಿ ಸ್ಥಾನಕ್ಕೆ ಭಾನುಪ್ರಕಾಶ ಶರ್ಮಾ(ಅಶೋಕ ಹಾರನಹಳ್ಳಿಯವರ) ಬಣದಿಂದ ಗುರುರಾಜ ಜೋಶಿ ಹಾಗೂ ರಘುನಾಥ್ ಅವರ ಬಣದಿಂದ ಪ್ರಾಣೇಶ್ ಮಾದಿನೂರು ಕಣದಲ್ಲಿದ್ದರು. ಎರಡು ಬಣದವರು ಮತ ನೀಡುವಂತೆ ವಿಪ್ರ ಬಾಂಧವರಲ್ಲಿ ಮನವಿ ಮಾಡುತ್ತಿದ್ದರು.
ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಮತದಾನ ನಡೆಯಿತು. ಮತದಾನದ ಬಳಿಕ ಮತ ಎಣಿಕೆ ಕಾರ್ಯಕ್ರಮವು ಪೂರ್ಣಗೊಂಡಿದೆ. ಜಿಲ್ಲೆಯಲ್ಲಿ ಒಟ್ಟು 1,190 ಮತದಾರರಿದ್ದು, ಗುರುರಾಜ ಜೋಶಿ 449 ಮತ ಪಡೆದಿದ್ದು, ನಗರದ ಪ್ರಾಣೇಶ ಮಾದಿನೂರು 309 ಮತ ಪಡೆದಿದ್ದಾರೆ. ಈ ಪೈಕಿ 29 ಮತಗಳು ತಿರಸ್ಕೃತಗೊಂಡಿವೆ.
ಮಹಾಸಭಾದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಶೋಕ ಹಾರನಹಳ್ಳಿ ಬಣದ ಭಾನುಪ್ರಕಾಶ ಶರ್ಮಾಗೆ 300 ಮತಗಳು ಮತ್ತು ರಘುನಾಥಗೆ 451 ಮತಗಳು ಬಂದಿದ್ದು, 36 ಮತಗಳು ತಿರಸ್ಕೃತಗೊಂಡಿವೆ. ಈ ಮೂಲಕ ಮಹಾಸಭಾದ ಜಿಲ್ಲಾ ಪ್ರತಿನಿಧಿಯಾಗಿ ಗುರುರಾಜ ಜೋಶಿ ಆಯ್ಕೆ ಆಗಿದ್ದಾರೆ.