ಚಿಕ್ಕೋಡಿ: ತಾಯಿ-ಮಗನ ಕೊಲೆ ಮಾಡಿ ದುಷ್ಕರ್ಮಿಗಳು ಪರಾರಿ

0
62

ಚಿಕ್ಕೋಡಿ ಅಥಣಿ ತಾಲೂಕಿನ ಕೊಡಗಾನೂರಿನಲ್ಲಿ ತಾಯಿ ಮಗನನ್ನು ಕೊಲೆ ಮಾಡಿದ ದುಷ್ಕರ್ಮಿಗಳು ಪರಾರಿಯಾಗಿರುವ ಘಟನೆ ನಡೆದಿದೆ. ಚಂದ್ರವ್ವ ಅಪ್ಪಾರಾಯ ಇಚೇರಿ(62) ಹಾಗೂ ವಿಠ್ಠಲ್ ಅಪ್ಪರಾಯ ಇಚೇರಿ(42) ಕೊಲೆಗೀಡಾದವರು.

ಇಬ್ಬರನ್ನೂ ಹೊಡೆದು ಕೊಲೆ ಮಾಡಿ, ಕಬ್ಬಿನ ಗದ್ದೆಯಲ್ಲಿ ಎಸೆದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮೃತ ಚಂದ್ರವ್ವಳಿಗೆ ಇಬ್ಬರು ಗಂಡು ಮಕ್ಕಳು ಇದ್ದರು ಎನ್ನಲಾಗುತ್ತಿದೆ. ಓರ್ವ ಕೆಲಸಕ್ಕೆಂದು ಬೇರೆ ಊರಲ್ಲಿ ವಾಸವಾಗಿದ್ದ. ಸ್ಥಳಕ್ಕೆ ಅಥಣಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.

Previous articleಒಗ್ಗೂಡಿಸಿದರೆ ಲಿಂಗಾಯತರು ಕೋಟಿಗೂ ಅಧಿಕ
Next articleಬಾಲಕಿ ಹತ್ಯೆ ಪ್ರಕರಣ: ಆರೋಪಿಗೆ ಗುಂಡು