ಹಣ ದುಪ್ಪಟ್ಟು ಪ್ರಕರಣ: 18 ಲಕ್ಷ ರೂ. ವಂಚನೆ

ಚಿಕ್ಕಮಗಳೂರು: ಹಣ ದುಪ್ಪಟ್ಟು ಮಾಡಿ ಲಾಭ ಮಾಡಿಕೊಡುವುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ನಂಬಿಸಿ 18 ಲಕ್ಷ ರೂ. ವಂಚಿಸಿರುವ ಪ್ರಕರಣ ನಗರದಲ್ಲಿ ನಡೆದಿದೆ.
ಹಣ ಹಾಕಿ ದುಪ್ಪಟ್ಟು ಲಾಭಾಂಶ ಗಳಿಸುವಂತೆ ಸಂದೇಶ ಬಂದಿದ್ದು, ಇದನ್ನು ನಂಬಿದ ವ್ಯಕ್ತಿಯೊಬ್ಬರು ಸೈಬರ್ ವಂಚಕರು ನೀಡಿದ ಖಾತೆಗೆ ಒಟ್ಟು 18 ಲಕ್ಷ ಹಣ ಹಾಕಿದ್ದಾರೆ. ಇವರಿಗೆ ಯಾವುದೇ ರೀತಿಯ ಅಸಲು ಹಣವಾಗಲಿ, ಲಾಭವಾಗಲಿ ನೀಡದೆ ಮೋಸ ಮಾಡಿರುತ್ತಾರೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ನಗರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೋಂದಾಯಿಸಲ್ಪಡದ ದಲ್ಲಾಳಿಗಳು ಅಥವಾ ವೇದಿಕೆಗಳಿದ್ದು, ಅವಾಸ್ತವಿಕ ಆದಾಯ ಅಥವಾ ಅಸಾಧಾರಣವಾಗಿ ಹೆಚ್ಚಿನ ಆದಾ ಯದ ಭರವಸೆ ನೀಡಿ, ಹೂಡಿಕೆಗಳನ್ನು ಮಾಡುವಂತೆ ಮತ್ತು ಯಾವುದೇ ಪಾರದರ್ಶಕತೆಯಿಲ್ಲದೆ ಶುಲ್ಕಗಳು, ಅಪಾಯಗಳು ಅಥವಾ ವ್ಯಾಪಾರ ಪದ್ಧತಿಗಳ ಬಗ್ಗೆ ಸ್ಪಷ್ಟ ಮಾಹಿತಿ ಒದಗಿಸದ ಕಳಪೆ ಗ್ರಾಹಕ ಸೇವೆ ಹೊಂದಿರುವ ಆನ್‌ಲೈನ್ ವ್ಯಾಪಾರ ವಂಚ ನೆಯ ಉದ್ದೇಶವುಳ್ಳ ಅನುಮಾನಾಸ್ಪದ ಲಿಂಕ್‌ಗಳ ಕುರಿತು ಸಾರ್ವಜನಿಕರು ಸದಾ ಎಚ್ಚರಿಕೆ ವಹಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆ ವಿನಂತಿಸಿದೆ.
ಈ ರೀತಿಯ ಯಾವುದೇ ಅನುಮಾನಾಸ್ಪದ ಲಿಂಕ್‌ಗಳು, ವಿಷಯ ಅಥವಾ ವಹಿವಾಟುಗಳಿದ್ದಲ್ಲಿ ತಕ್ಷಣವೇ ಸೈಬರ್ ಸಹಾಯವಾಣಿ ೧೯೩೦ ಅಥವಾ ಹತ್ತಿರದ ಪೊಲೀಸ್ ಠಾಣೆ ಅಥವಾ ಸೆನ್ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡುವಂತೆ ಸಾರ್ವಜನಿ ಕರಲ್ಲಿ ವಿನಂತಿಸಿದೆ.