Home Advertisement
Home ಅಪರಾಧ ತಂದೆಯಿಂದ ಮಗಳ ಮೇಲೆ ಅತ್ಯಾಚಾರ: ಆರೋಪಿ ಬಂಧನ

ತಂದೆಯಿಂದ ಮಗಳ ಮೇಲೆ ಅತ್ಯಾಚಾರ: ಆರೋಪಿ ಬಂಧನ

0
133

ಗದಗ(ಮುಳಗುಂದ): ತಂದೆಯಿಂದ ಮಗಳ ಮೇಲೆ ನಿರಂತರ ಅತ್ಯಾಚಾರವೆಸಗಿ ಮಗಳನ್ನು ಗರ್ಭಿಣಿ ಮಾಡಿದ ಹೇಯ ಕೃತ್ಯವೊಂದು ಗದಗ ಜಿಲ್ಲೆಯ ಮುಳಗುಂದ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಂದೆಯೇ ಮಗಳ ಮೇಲೆ ಕಳೆದೊಂದು ವರ್ಷದಿಂದ ನಿರಂತರ ಅತ್ಯಾಚಾರವೆಸಗಿ ಈಗ ಸದ್ಯ ಮಗಳು 31 ವಾರಗಳ ಗರ್ಭಿಣಿಯಾಗಿದ್ದು ಬಾಲಕಿ ಗದಗನ ಜಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಈ ಕುರಿತಂತೆ ಪ್ರಕರಣದ ಸುದ್ದಿ ತಿಳಿದ ಮುಳಗುಂದ ಠಾಣಾ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಗಳು 16 ವರ್ಷದ ಬಾಲಕಿಯಾಗಿದ್ದು, 55 ವರ್ಷದ ತಂದೆ ಒಂದು ವರ್ಷದಿಂದ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನಿರಂತರ ಅತ್ಯಾಚಾರ ಮಾಡುತ್ತಾ ಬಂದಿದ್ದಾನೆ ಎಂದು ಗೊತ್ತಾಗಿದೆ.
ಅತ್ಯಾಚಾರದ ನಂತರ ಮಗಳಿಗೆ ಯಾರಿಗೂ ವಿಷಯ ತಿಳಿಸದಂತೆ ತಾಕೀತು ಮಾಡುತ್ತಿದ್ದ. ಆಕಸ್ಮಿಕವಾಗಿ ಎಲ್ಲಿಯಾದರೂ ಬಾಯಿ ಬಿಟ್ಟರೆ ಕೊಲೆ ಮಾಡುವುದಾಗಿಯು ಬೆದರಿಕೆ ಹಾಕುತ್ತಿದ್ದ ಎಂದು ಬಾಲಕಿ ಪೊಲೀಸರ ಎದುರು ಅಳಲು ತೋಡಿಕೊಂಡಿದ್ದಾಳೆ. ಅಲ್ಲದೇ ಬಾಲಕಿಯ ತಾಯಿಯೇ ತನ್ನ ಸ್ವಂತ ಗಂಡನ ವಿರುದ್ಧ ಮುಳಗುಂದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ಈ ದೂರಿನನ್ವಯ ಪೋಕ್ಸೊ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇದೀಗ ಡಿಎನ್‌ಎ ಪರೀಕ್ಷೆಗೊಳಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

Previous articleರಾಜ್ಯದಲ್ಲಿ ಇನ್ನೂ 800 ಬಸ್‌ಗಳು ರಸ್ತೆಗೆ
Next articleಯಾರು ಕೆಲಸದಲ್ಲಿ ಸಹಾಯ ಮಾಡುವುದಿಲ್ಲವೋ ಅವರು ವಿಶ್ರಾಂತಿ ಪಡೆಯಲಿ