ಭ್ರಷ್ಟಾಚಾರ ‌3 ವರ್ಷದಲ್ಲಿ ರಾಜ್ಯದಿಂದ ನಿರ್ಮೂಲ

ರಾಯರೆಡ್ಡಿ ಹಿಂದೆ ಬಿಜೆಪಿ ಸರ್ಕಾರದಲ್ಲಿ ಇದ್ದ ಪರಿಸ್ಥಿತಿ ಹೇಳಿದ್ದಾರೆ

ಯಾದಗಿರಿ: ನಾನು‌ ಅಧ್ಯಕ್ಷರ ಬದಲಾವಣೆ ಬಗ್ಗೆ ಪಬ್ಲಿಕ್ ನಲ್ಲಿ ಮಾತಾಡೋದಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಗರದ ಮಾಧ್ವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಚರ್ಚೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಬಹಳ ಸ್ಪಷ್ಟವಾಗಿ ಆ ರೀತಿ ಮಾತಾಡಬಾರದು ಅಂತ ಹೈಕಮಾಂಡ್ ಹೇಳಿದೆ, ಯಾರು ಯಾರು ಮಾತಾಡ್ತಾರೆ ಅವರ ಬಗ್ಗೆ ನಾನು ಕಮೆಂಟ್ ಮಾಡಲ್ಲ, ನಾನು ಯಾವತ್ತೂ ಮಾತಾಡೋದಿಲ್ಲ ಎಂದರು.
ಇನ್ನು ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿ ಮುದುವರೆಯುವ ವಿಚಾರವಾಗಿ ನಾನು ಯಾವುದರ ಬಗ್ಗೆಯೂ ಮಾತಾಡಲ್ಲ ಎಂದ ಅವರು, ಕರ್ನಾಟಕ ನಂಬರ್ ಒನ್ ಭ್ರಷ್ಟ ರಾಜ್ಯ ಎಂಬ ಶಾಸಕ ರಾಯರೆಡ್ಡಿ ಹೇಳಿಕೆ ವಿಚಾರವಾಗಿ ಮಾತನಾಡಿ ಹಿಂದೆ ಬಿಜೆಪಿ ಸರ್ಕಾರದಲ್ಲಿ ಇದ್ದ ಪರಿಸ್ಥಿತಿ ಅವರು ಹೇಳಿದ್ದಾರೆ, ನಮ್ಮ ಅವಧಿಯಲ್ಲಿ ಸುಧಾರಣೆ ಆಗ್ತಾಯಿದೆ, ಭ್ರಷ್ಟಾಚಾರ ಕಡಿಮೆ ಆಗುತ್ತಿದೆ, ಇನ್ನು ‌3 ವರ್ಷದಲ್ಲಿ ಸಂಪೂರ್ಣ ಕಡಿಮೆ ಆಗುತ್ತೆ, ಬಿಜೆಪಿ ಅಧಿಕಾರದಲ್ಲಿದ್ದಾಗ ಇದ್ದಾಗ ನೂರಕ್ಕೆ ನೂರು ಭಾಗ ಭ್ರಷ್ಟಾಚಾರ ದೇಶದಲ್ಲಿ ಜಾಸ್ತಿ ಇತ್ತು ಅಂತ ಹೇಳಿದ್ದಾರೆ, ಆದರೆ ನಮ್ಮ ಅವಧಿಯಲ್ಲಿ ನಡೆದಿರುವದಲ್ಲ, ಸರ್ಕಾರದ ಜೆಡಿಎಸ್ ಫೋಸ್ಟರ್ ಅಭಿಯಾನ ವಿಚಾರ‌ವಾಗಿ ಮಾತನಾಡಿ ಜೆಡಿಎಸ್‌ನವರು ಏನೇ ಮಾಡಿದ್ರು ಜನ ಅವರಿಗೆ ತಿರಸ್ಕಾರ ಮಾಡಿದ್ದಾರೆ‌, ಯಾಕೆಂದ್ರೆ ಅವರ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರ, ಹಗರಣಗಳ ಮೇಲೆ ಹಗಣರಗಳು ನಡೆದಿವೆ ಬೆಲೆ ಏರಿಕೆ ಮಾಡಿದ್ರು ಇದರಿಂದ ಅವರನ್ನ ಜನ ತಿರಸ್ಕಾರ ಮಾಡಿದ್ರು, ಅದಕ್ಕೆ ನಮಗೆ 136 ಸ್ಥಾನವನ್ನ ಗೆಲ್ಲಿಸಿದ್ದಾರೆ ಎಂದರು.