ಮಗಳಿಗಾಗಿ ಯುದ್ಧಕಾಂಡ ಸಿನಿಮಾ ನಿರ್ಮಿಸಿರುವುದಾಗಿ ಅಜಯ್ ರಾವ್ ಇತ್ತೀಚೆಗೆ ಹೇಳಿಕೊಂಡಿದ್ದರು.
ಹಾಗೆಯೇ ಈ ಸಿನಿಮಾ ಮಾಡಲು ಸಾಕಷ್ಟು ಸಾಲ ಮಾಡಿಕೊಂಡಿದ್ದರ ಕುರಿತು ಮಾತನಾಡಿದ್ದರು.
ಚಿತ್ರೀಕರಣದ ವೇಳೆ ಹಣದ ಕೊರತೆಯಿಂದ ತಮ್ಮ ಬಳಿಯಿದ್ದ ಬಿಎಂಡಬ್ಲ್ಯು ಕಾರನ್ನು ಮಾರಿದ್ದಾರೆ. ಇದು ಅವರ ಪುತ್ರಿಯ ಅಚ್ಚು ಮೆಚ್ಚಿನ ಕಾರಾಗಿತ್ತು. ಹೀಗಾಗಿ ಅದನ್ನು ಖರೀದಿಸಿದವರು ತೆಗೆದುಕೊಂಡು ಹೋಗಲು ಬಂದಾಗ ಅಜೇಯ್ ಪುತ್ರಿ ಚೆರಿಷ್ಮಾ ಸಿಕ್ಕಾಪಟ್ಟೆ ಅತ್ತಿರುವುದನ್ನು ನೋಡಿದರೆ ಎಂಥವರನ್ನೂ ಭಾವುಕರನ್ನಾಗಿಸುತ್ತದೆ.