ಮುಂಡಗೋಡ: ಕ್ರಿಕೆಟ್ ಬೆಟ್ಟಿಂಗ್ ನಡೆಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ಒಬ್ಬನನ್ನು ಬಂಧಿಸಿದ್ದು ಮತ್ತೆ ಮೂರು ಜನರು ಪರಾರಿಯಾದ ಘಟನೆ ಭಾನುವಾರ ಸಂಜೆ ಪಟ್ಟಣದ ಬಸ್ ನಿಲ್ದಾಣದ ಬಳಿ ಜರುಗಿದೆ.
ಪಟ್ಟಣದ ಅಂಬೇಡ್ಕರ್ ಓಣಿ ನಿವಾಸಿ ಮಂಜುನಾಥ ನಾಗಪ್ಪ ಕೊರವರ(33) ಎಂಬುವನ್ನು ಬಂಧಿತನಾಗಿದ್ದು ಆನಂದನಗರದ ವೆಂಕಟೇಶ ಅಶೊಕ ಅರಿವಾಣ, ಗದಗದ ದೇವೆಂದ್ರ ಬೈಲಪ್ಪ ಆಸಂಗಿ, ಚಿಗಳ್ಳಿ ಗ್ರಾಮದ ಹರೀಶ ದೇವೆಂದ್ರಪ್ಪ ಬಾಳಮ್ಮನವರ ಎಂಬುವುವರು ಪರಾರಿಯಾಗಿದ್ದಾರೆ.
ನಾಲ್ಕು ಜನರು ಬಸ್ ನಿಲ್ದಾಣದ ಬಳಿ ಐಪಿಎಲ್ ಕ್ರಿಕೆಟ್ ರಾಜಸ್ಥಾನ ಹಾಗೂ ಪಂಜಾಬ್ ತಂಡಗಾಳ ನಡುವೆ ನಡೆದ ಪಂದ್ಯದ ಮೇಲೆ ಬೆಟ್ಟಿಂಗ್ ಕಟ್ಟಿ ಬರುವ ಹಾಗೂ ಹೋಗುವ ಜನರಿಂದ ಸಂಪರ್ಕಿಸಿ ಹಣದ ಬೆಟ್ಟಿಂಗ್ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮಂಜುನಾಥ ಕೊರವರ ಎಂಬವನನ್ನು ವಶಕ್ಕೆ ಪಡೆದಿದ್ದು, ಉಳಿದ ಮೂರು ಪರಾರಿಯಾಗಿದ್ದು, ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.