ಆಸ್ತಿಗಳ‌ ಸರಳೀಕರಣಕ್ಕಾಗಿ ಇ ಖಾತಾ ಅಭಿಯಾನ

0
20

ಕಲಬುರಗಿ ಸ್ಮಾರ್ಟ್ ಸಿಟಿ ಮಾಡಲು ಮುಂದಿನ ಎರಡು ತಿಂಗಳ ಒಳಗಾಗಿ ನೀಲಿ ನಕ್ಷೆ

ಕಲಬುರಗಿ: ಆಸ್ತಿಗಳ ಸರಳೀಕರಣ ಹಾಗೂ ಬಲಿಷ್ಠಗೊಳಿಸಲು ಸರ್ಕಾರ ಎ ಖಾತಾ ಹಾಗೂ ಬಿ ಖಾತಾ ವ್ಯವಸ್ಥೆ ಜಾರಿಗೆ ತಂದಿದೆ. ಇದರಿಂದ ಸ್ವತ್ತುಗಳ ಮಾಲೀಕತ್ವ ನೀಡಲಾಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಇಲ್ಲಿನ ಮಹಾನಗರ ಪಾಲಿಕೆಯ ಉದ್ಯಾನವನದ ಇಂದಿರಾ ಸ್ಮಾರಕ ಭವನದಲ್ಲಿ ನಡೆದ ಇ‌ ಖಾತಾ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿ ರಾಜ್ಯದಲ್ಲಿ ಗ್ರಾಮೀಣ ಭಾಗದ ಒಟ್ಟು 11.50 ಲಕ್ಷ ಅಸ್ತಿಗಳನ್ನು ತೆರಿಗೆ ವ್ಯಾಪ್ತಿಗೆ ತರಲಾಗಿದ್ದು ಇದರಿಂದ ರೂ 1,272 ಕೋಟಿ ರೂ ತೆರಿಗೆ ಸಂಗ್ರಹವಾಗಿದೆ.‌ಇದರಿಂದ ಗ್ರಾಮೀಣ ವ್ಯಾಪ್ತಿಯಲ್ಲಿ ಅಭಿವೃದ್ದಿ ಕೆಲಸಗಳಾಗುತ್ತವೆ ಎಂದರು.

ನಗರಪಾಲಿಕೆ ವ್ಯಾಪ್ತಿಯಲ್ಲಿ ಸ್ವತ್ತುಗಳಿಗೆ ಅಥವಾ ವಸತಿ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಒದಗಿಸಿದರು ಕೂಡಾ ಅವುಗಳ ಮಾಲಿಕತ್ವ ದೊರಕಿರಲಿಲ್ಲ. ಎ ಖಾತಾ ಹಾಗೂ ಬಿ ಖಾತಾ ವಿತರಿಸುವ ಮೂಲಕ ಮಾಲೀಕತ್ವವನ್ನೂ ಕೂಡಾ ನೀಡಲಾಗುತ್ತಿದೆ.‌ ಎ ಖಾತಾ ಹಾಗೂ ಬಿ‌ ಖಾತಾ ಅನ್ವಯ ಗ್ರಾಮೀಣ ಭಾಗದ ಸ್ವತ್ತುಗಳನ್ನು ಕೂಡಾ ಕಾನೂನುಬದ್ದಗೊಳಿಸಲಾಗುವುದು ಎಂದು ಕೂಡಾ ಸಚಿವರು ತಿಳಿಸಿದರು. ಈ ಅಭಿಯಾನದ ಲಾಭವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು ಕರೆ ನೀಡಿದರು.

ಕಲಬುರಗಿ ಯನ್ನು ಸ್ಮಾರ್ಟ್ ಸಿಟಿ ಯನ್ನಾಗಿ ಮಾಡಲು ಮುಂದಿನ ಎರಡು ತಿಂಗಳ ಒಳಗಾಗಿ ನೀಲಿ ನಕ್ಷೆ ತಯಾರಿಸಲಾಗುತ್ತಿದ್ದು, ನಗರ ಸೌಂದರ್ಯಕ್ಕೆ ಹೆಚ್ಚು ಒತ್ತು ನೀಡಲಾಗುತ್ತಿದೆ.‌ಉದ್ಯಾಮವನಗಳ ನಿರ್ಮಾ, ಔದ್ಯೋಗಿಕ ಅಭಿವೃದ್ದಿ, ರಸ್ತೆ ಚರಂಡಿಗಳ ಅಭಿವೃದ್ದಿ ಸೇರಿದಂತೆ ವಿವಿಧ ನಾಗರಿಕ‌ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಈ‌ ಸಂದರ್ಭದಲ್ಲಿ ಸಚಿವರು ಸಾಂಕೇತಿಕವಾಗಿ ಖಾತಾಗಳನ್ನು ಸಾರ್ವಜನಿಕರಿಗೆ ವಿತರಿಸಿದರು.

ವೇದಿಕೆಯ ಮೇಲೆ ಶಾಸಕರಾದ ಅಲ್ಲಮಪ್ರಭು ಪಾಟೀಲ,‌ ಕನೀಜ್ ಫಾತೀಮ, ತಿಪ್ಪಣ್ಣಪ್ಪ‌ ಕಮಕನೂರು‌, ಚಂದ್ರಶೇಖರ ಪಾಟೀಲ, ಕುಡಾ ಅಧ್ಯಕ್ಷ ಮಜರ್ ಆಲಂ‌ ಖಾನ್, ಕಮೀಷನರ್ ಅವಿನಾಶ ಶಿಂಧೆ ಸೇರಿದಂತೆ ಹಲವರು ಮೇಲಿದ್ದರು.

Previous articleಕುಡಿಯುವ ನೀರಿನ ಸಮಸ್ಯೆ ನೀಗಿಸಲು ಅಗತ್ಯ ಕ್ರಮ
Next articleಏಪ್ರಿಲ್ 9ಕ್ಕೆ ಕಾಂಗ್ರೆಸ್ಸಿನ ದುರಾಡಳಿತದ ವಿರುದ್ಧ ದ.ಕ ಜಿಲ್ಲೆಯಲ್ಲಿ ಜನಾಕ್ರೋಶ ಯಾತ್ರೆ