ರಾಮನವಮಿಗೆ ಯಾದಗಿರಿಯಲ್ಲಿ ಸಿದ್ದಗೊಂಡ  ರಾಮಮಂದಿರ ಕಲಾಕೃತಿ

ಯಾದಗಿರಿ : ನಾಡಿನೆಲ್ಲೆಡೆ  ರಾಮ ನವಮಿ ಸಂಭ್ರಮ ಕಳೆಗಟ್ಟಿದೆ ಇದರ ನಡುವೆ ಯಾದಗಿರಿಯ ಕೆಂಭಾವಿ ಪಟ್ಟಣದ ಉತ್ತಾರಧಿ ಮಠದಲ್ಲಿ ರಾಮ ಮಂದಿರದ ಪ್ರತಿಕೃತಿ ಮಾಡಿ ಭಕ್ತರು ರಾಮನವಮಿಯನ್ನು ವಿಶೇಷವಾಗಿ  ಆಚರಣೆ ಮಾಡಿದ್ದಾರೆ. ಅಯ್ಯೋದೆಯಲ್ಲಿರುವ ಮಂದಿರದಂತೆ ಅದೇ ಮಾದರಿಯಲ್ಲಿ ಚಿತ್ರಕಾರ  ತುಮಕೂರಿನ ವಿನಯರಾಮ ಎಂಬವರು ಕಲಾಕೃತಿಯನ್ನು ಮಾಡಿದ್ದಾರೆ
ಅಯೋಧ್ಯೆಯ ಮಂದಿರದಂತೆಯೇ ಮೂರು ಮಹಡಿ ರಚಿಸಿದ್ದು, ನೆಲಮಹಡಿಯಲ್ಲಿ ಬಾಲರಾಮನ ಮೂರ್ತಿ, ಆರಂಭದಲ್ಲಿ ರಾಮ-ಸೀತೆ, ಭರತ-ಲಕ್ಷ್ಮಣ ಹಾಗೂ ಹನುಮನ ಚಿಕ್ಕ ಮೂರ್ತಿಗಳನ್ನು ಅಳವಡಿಸಿದ್ದಾರೆ. ಆಕರ್ಷಕವಾದ ಪ್ರತಿಕೃತಿಯ ಮಾದರಿಯು ಗಮನ ಸೆಳೆಯುತ್ತಿದೆ.