ಶಿವಮೊಗ್ಗದಲ್ಲಿ ಲಾರಿ-ಕಾರು ನಡುವೆ ಡಿಕ್ಕಿ: ಮೂವರು ಸಾವು

0
22
ಅಪಘಾತ

ಶಿವಮೊಗ್ಗ: ಲಾರಿ ಹಾಗೂ ಕಾರಿನ ನಡುವೆ ಡಿಕ್ಕಿ ನಡೆದು ಶಿವಮೊಗ್ಗದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮೂವರು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ. ಮೃತರನ್ನು ದಾವಣಗೆರೆ ಮೂಲದ ಕಾರ್ತಿಕ್, ವಿವೇಕ್, ಮೋಹನ್ ಎಂದು ಗುರುತಿಸಲಾಗಿದ್ದು, ದುರ್ಘಟನೆಯಲ್ಲಿ ರುದ್ರೇಶ್ ಪಾಟೀಲ್ ಎಂಬುವವರಿಗೆ ಗಂಭೀರ ಗಾಯಗಳಾಗಿದೆ. ಶಿವಮೊಗ್ಗದ ಕಲ್ಲುಕೊಪ್ಪ ಬಳಿ ಈ ಘಟನೆ ನಡೆದಿದೆ. ಶಿವಮೊಗ್ಗದಿಂದ ದಾವಣಗೆರೆ ಕಡೆ ಕಾರು ತೆರಳುತ್ತಿತ್ತು. ಈ ವೇಳೆ ಕಾರು ಹಾಗೂ ಶಿವಮೊಗ್ಗಕ್ಕೆ ತೆರಳುತ್ತಿದ್ದ ಮೆಕ್ಕೆ ಜೋಳ ತುಂಬಿದ್ದ ಲಾರಿ ನಡುವೆ ಅಪಘಾತವಾಗಿದೆ. ಘಟನೆ ವೇಳೆ ಕಾರು ಜಖಂಗೊಂಡಿದ್ದು, ಅದರಲ್ಲಿದ್ದ ಮೂವರು ಸಾವನ್ನಪ್ಪಿದ್ದಾರೆ. ಘಟನೆ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ. ಶಿವಮೊಗ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Previous articleಹು-ಧಾ ಸ್ಮಾರ್ಟ್ ಸಿಟಿಗೆ ನೂತನ ಎಂಡಿ ಪ್ರಿಯಾಂಗ ಎಂ
Next articleಜೆಡಿಎಸ್ ಮುಖಂಡನ ಮನೆಯಲ್ಲಿ ಹುಲಿ ಚರ್ಮ ಪತ್ತೆ