ರಜೆ ಮೇಲೆ ಊರಿಗೆ ಹೊರಟಿದ್ದ ಯೋಧ ಅಪಘಾತದಲ್ಲಿ ಸಾವು

0
18

ಚಿಕ್ಕೋಡಿ: ರಜೆ ಸಿಕ್ಕಿತು ಎಂದು ಖುಷಿಯಿಂದ ಹೊರಟಿದ್ದ ಬೆಳಗಾವಿ ಜಿಲ್ಲೆಯ ನಿಪ್ಪಾಣಿಯ ಯೋಧ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ತುಂಡ್ಲಾ ರೈಲು ನಿಲ್ದಾಣದಲ್ಲಿ ನಡೆದಿದೆ.
ರಾಜೇಂದ್ರ ಪಾಂಡುರಂಗ ಕುಂಬಾರ(45) ಮೃತ ಯೋಧ. ಇವರು ಕಳೆದ 22 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಯೋಧನಾಗಿ ರಾಜೇಂದ್ರ ಸೇವೆ ಸಲ್ಲಿಸುತ್ತಿದ್ದರು. ಕಳೆದ ತಿಂಗಳಷ್ಟೆ ದೆಹಲಿಯಿಂದ ಉತ್ತರ ಪ್ರದೇಶದ ಪ್ರಯಾಗರಾಜ್‌ಗೆ ವರ್ಗವಾಗಿದ್ದ ಯೋಧ ಮನೆಗೆ ಬರಲು 15 ದಿನ ರಜೆ ಪಡೆದು ಊರಿಗೆ ಹೊರಟಿದ್ದ‌.
ತುಂಡ್ಲಾ ರೈಲು ನಿಲ್ದಾಣದಲ್ಲಿ ಒಂದು ರೈಲು ಇಳಿದು ಮತ್ತೊಂದು ರೈಲು ಹತ್ತುವಾಗ ದುರ್ಘಟನೆ ಸಂಭವಿಸಿದೆ.
ಪಾರ್ಥಿವ ಶರೀರ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆ ದೆಹಲಿಯಿಂದ ಬೆಳಗಾವಿಗೆ ತರುವ ಸಾಧ್ಯತೆಯಿದೆ. ಯೋಧನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಿಪ್ಪಾಣಿಯಲ್ಲಿ ಶೋಕ‌ ಮಡುಗಟ್ಟಿದೆ.

Previous articleವಿರಾಟ್ ಕೊಹ್ಲಿ ಶತಕ: ರಿಕಿ ಪಾಂಟಿಂಗ್ ದಾಖಲೆ ಪತನ
Next articleಭೂಪೇಂದ್ರ ಪಟೇಲ್‌ ಸೋಮವಾರ ಪ್ರಮಾಣ ವಚನ