ಅಂಕಪಟ್ಟಿ ತಿದ್ದಿ ನೌಕರಿ ಪಡೆದಿದ್ದವರಿಗೆ ಜೈಲು ಶಿಕ್ಷೆ

0
16
ಜೈಲು

ಶಿವಮೊಗ್ಗ: ಅಂಕಪಟ್ಟಿ ತಿದ್ದಪಡಿ ಮಾಡಿ ಮೆಸ್ಕಾಂ ಇಲಾಖೆಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಇಬ್ಬರು ಆರೋಪಿಗಳಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
2016ರಲ್ಲಿ ಗಣೇಶ್ ಗೌಡ ಬಿ.ಜಿ ಮತ್ತು ಬಿ.ಬಿ. ಗೀರಿಶ್ ಇವರು ಕರ್ತವ್ಯಕ್ಕೆ ವರದಿ ಮಾಡಿಕೊಂಡಾಗ, ಎಸ್ಸೆಸ್ಸೆಲ್ಸಿ ಮೂಲ ಅಂಕಪಟ್ಟಿಯ ಬದಲಾಗಿ ಜೆರಾಕ್ಸ್ ಅಂಕಪಟ್ಟಿ ಸಲ್ಲಿಸಿ ವಂಚಿಸಿದ್ದು, ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ತನಿಖಾಧಿಕಾರಿ ಹಾಗೂ ಪಿಎಸ್‌ಐ ಇಮ್ರಾನ್ ಬೇಗ್, ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸಹಾಯಕ ಸರ್ಕಾರಿ ಅಭಿಯೋಜಕರಾದ ಕಿರಣ್ ಕುಮಾರ್ ಹಾಗೂ ರಂಜಿತ್ ಕುಮಾರ್ ಪ್ರಕರಣದ ವಾದ ಮಂಡಿಸಿದ್ದು, ನ್ಯಾಯಾಧೀಶರಾದ ಶಿವಕುಮಾರ್ ಜಿ.ಎನ್ ಅವರು ಆರೋಪಿಗಳಾದ ಹೊನ್ನಾಳಿ ತಾಲೂಕು ಆರುಂಡಿ ಗ್ರಾಮದ ಗಣೇಶ್ ಗೌಡ ಬಿ.ಜಿ.ಎಂ(೨೩) ಮತ್ತು ದಾವಣಗೆರೆ ತಾಲೂಕಿನ ಕಂದಗಲ್ ಗ್ರಾಮದ ಬಿ.ಬಿ. ಗೀರಿಶ್(೨೭) ಇವರುಗಳ ವಿರುದ್ಧ ವಂಚನೆ ಆರೋಪ ಧೃಡಪಟ್ಟ ಹಿನ್ನೆಲೆಯಲ್ಲಿ ಆರೋಪಿತರಿಗೆ ತಲಾ 4 ಸಾವಿರ ದಂಡ ಹಾಗೂ ೬ ತಿಂಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

Previous articleನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ ₹ 10.97 ಕೋಟಿ ವಂಚಿಸಿದ ಮ್ಯಾನೇಜರ್
Next articleಪೋಕ್ಸೋ ಪ್ರಕರಣದ ಆರೋಪಿಗೆ 7 ವರ್ಷ ಜೈಲು ಶಿಕ್ಷೆ