ಬೆಂಗಳೂರು: ಐಪಿಎಲ್‌ನ 18ನೇ ಆವೃತಿಯಲ್ಲಿ ಇಂದು ಆರ್‌ಸಿಬಿ ಮತ್ತು ಸಿಎಸ್‌ಕೆ ತಂಡಗಳು ಮುಖಾಮುಖಿಯಾಗಲಿವೆ.
ಉಭಯ ತಂಡಗಳ ನಡುವೆ 33 ಪಂದ್ಯಗಳು ನಡೆದಿದ್ದು, ಚೆನ್ನೈ 21 ಬಾರಿ ಗೆದ್ದಿದ್ದರೆ, ಬೆಂಗಳೂರು ತಂಡ RCB 11 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ. ಕಳೆದ ವರ್ಷ, ಐಪಿಎಲ್ 2024 ರಲ್ಲಿ ಉಭಯ ತಂಡಗಳ ನಡುವಿನ ಕೊನೆಯ ಗುಂಪು ಹಂತದ ಪಂದ್ಯದಲ್ಲಿ, ಆರ್‌ಸಿಬಿ ಸಿಎಸ್‌ಕೆ ತಂಡವನ್ನು 24 ರನ್‌ಗಳಿಂದ ಸೋಲಿಸಿತು. ಇನ್ನು ಎರಡೂ ತಂಡಗಳು ಇಲ್ಲಿಯವರೆಗೆ ಚೆನ್ನೈನಲ್ಲಿ 9 ಬಾರಿ ಮುಖಾಮುಖಿಯಾಗಿದ್ದು, 8 ಪಂದ್ಯಗಳಲ್ಲಿ ಚೆನ್ನೈ ಗೆದ್ದಿದ್ದರೆ, ಬೆಂಗಳೂರು ಇಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ, ಅದು ಕೂಡ ಐಪಿಎಲ್‌ನ ಮೊದಲ ಋತುವಿನಲ್ಲಿ, ಅಂದರೆ 2008 ರಲ್ಲಿ, ಅಂದಿನಿಂದ ಬೆಂಗಳೂರು ಚೆನ್ನೈ ಮೈದಾನದಲ್ಲಿ ಒಂದೇ ಒಂದು ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಸದ್ಯ ಎರಡೂ ತಂಡಗಳು ತಮ್ಮ ಮೊದಲ ಪಂದ್ಯಗಳನ್ನು ಗೆದ್ದಿದ್ದು. ಸದ್ಯ ಟೇಬಲ್ ಟಾಫರ್ ಆಗಿರುವ ಆರ್‌ಸಿಬಿ ಚೆಪಾಕ್‌ನಲ್ಲಿ 17 ವರ್ಷಗಳ ಬಳಿಕ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ. ಕೆಲವೇ ಕ್ಷಣಗಳಲ್ಲಿ ಪಂದ್ಯ ಆರಂಭವಾಗಲಿದ್ದು, ಚೆನ್ನೈನ ಎಂ.ಎ.ಚಿದಂಬರಂ ಮೈದಾನ ಇಂದು ಆರ್‌ಸಿಬಿ vs ಚೆನ್ನೈ ನಡುವಿನ ಹೈವೋಲ್ಟೇಜ್ ಕದನಕ್ಕೆ ಸಾಕ್ಷಿಯಾಗಲಿದೆ.