ಕೊಪ್ಪಳ: ಕೊಪ್ಪಳ ಮಠದ ವಿವಾದ ಹಿನ್ನಲೆ ನಗರದ ರಾಘವೇಂದ್ರಸ್ವಾಮಿ ಮಠದೊಳಗೆ ಬಾರದೇವ ಗುರುವಾರ ಮಂತ್ರಾಲಯದ ರಾಘವೇಂದ್ರ ಮಠದ ಪೀಠಾಧಿಪತಿ ಸುಭುದೇಂದ್ರ ತೀರ್ಥರು ಶ್ರೀಪಾಂದಗಳವರ ತೆರಳಿದರು.
ಗುರುವಾರ ತಡರಾತ್ರಿ ನಡೆದ ರಾಯರ ಮಠದ ಆಸ್ತಿ ಮಂತ್ರಾಲಯ ಮಠಕ್ಕೆ ಸೇರಿದ್ದು ಎಂಬ ಶ್ರೀಗಳ ಮಾತು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆ ನಗರದ ವಿಪ್ರ ಬಾಂಧವರು ಶ್ರೀಗಳನ್ನು ಭೇಟಿ ಮಾಡಿ, ಮಠ ಯಥಾಸ್ಥಿತಿಯಲ್ಲಿಯೇ ಇರಬೇಕು. ನೀವು ಹಸ್ತಕ್ಷೇಪ ಮಾಡಬಾರದೆಂದು ಒತ್ತಾಯಿಸಿದರು. ಇದರ ಬೆನ್ನಲ್ಲೆ ಶುಕ್ರವಾರ ನಗರದ ಮಠದ ಮುಂಭಾಗದಲ್ಲಿಯೇ ಕಾರು ನಿಲ್ಲಿಸಿ, ಒಳಗೆ ಬಾರದೇ, ರಾಯರಿಗೆ ಪೂಜೆ ಸಲ್ಲಿಸದೇ ತೆರಳುವ ಮೂಲಕ ಅಸಮಾಧಾನ ಹೊರಹಾಕಿದರು.
ಈ ಕುರಿತು ಮಾತನಾಡಿದ ಸುಭುದೇಂದ್ರ ತೀರ್ಥರ, ಕಾರಣಾಂತರಗಳಿಂದ ಕೊಪ್ಪಳ ರಾಯರ ಮಠದಲ್ಲಿನ ಕಾರ್ಯಕ್ರಮಗಳನ್ನು ರದ್ದು ಮಾಡಿದ್ದೇವೆ. ದಿಢೀರ್ ಅನ್ಯಕಾರ್ಯದ ನಿಮಿತ್ತ ಬೇರೆ ಕಡೆ ತೆರಳುತ್ತಿದ್ದು, ಸಮಯವಿಲ್ಲದ ಕಾರಣ, ರಾಯರ ಮಠದ ಒಳಗೆ ಹೋಗದೇ ತೆರಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಬಂದು, ಪೂಜೆ ಸಲ್ಲಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.