ಬಿಸಿಸಿಐ 2024-25ನೇ ಸಾಲಿನ retainership ವಾರ್ಷಿಕ ಆಟಗಾರರ ಪಟ್ಟಿ ಪ್ರಕಟ

ನವದೆಹಲಿ: ಬಿಸಿಸಿಐ 2024-25ನೇ ಸಾಲಿನ ಟೀಮ್ ಇಂಡಿಯಾ ಮಹಿಳೆಯರ ವಾರ್ಷಿಕ ಆಟಗಾರರ ಉಳಿಸಿಕೊಳ್ಳುವ ಪಟ್ಟಿಯನ್ನು ಪ್ರಕಟಿಸಿದೆ.
ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದು. ಒಟ್ಟು 16 ಮಂದಿ ಆಟಗಾರರು ವಾರ್ಷಿಕ ಗುತ್ತಿಗೆ ಪಡೆದಿರುವ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ, BCCI 2024-25ರ ಋತುವಿಗಾಗಿ (ಅಕ್ಟೋಬರ್ 1, 2024 ರಿಂದ ಸೆಪ್ಟೆಂಬರ್ 30, 2025 ರವರೆಗೆ) ಟೀಮ್ ಇಂಡಿಯಾ (ಹಿರಿಯ ಮಹಿಳೆಯರು) ವಾರ್ಷಿಕ ಆಟಗಾರರ ಒಪ್ಪಂದಗಳನ್ನು ಪ್ರಕಟಿಸಿದೆ. ಮೂರು ಗ್ರೇಡ್‌ನಲ್ಲಿ ಪಟ್ಟಿ ಪ್ರಕಟಿಸಿದ ಬಿಸಿಸಿಐ ಎ ಗ್ರೇಡ್‌ನಲ್ಲಿ ನಾಯಕಿ ಹರ್ಮನ್ ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧನಾ ಮತ್ತು ಆಲ್ ರೌಂಡರ್ ದೀಪ್ತಿ ಶರ್ಮಾ ಎ ಗ್ರೇಡ್‌ನಲ್ಲಿ ಈ ಮೂವರು ಆಟಗಾರರು ಸ್ಥಾನ ಪಡೆದಿದ್ದರೆ, ಬಿ ಗ್ರೇಡ್‌ನಲ್ಲಿ ರೇಣುಕಾ ಥಾಕೂರ್, ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ ಮತ್ತು ರಿಚಾ ಘೋಶ್ ಸೇರಿ ಒಟ್ಟು ನಾಲ್ಕು ಮಂದಿ ಸ್ಥಾನ ಪಡೆದಿದ್ದಾರೆ. ಇನ್ನು ಸಿ ಗ್ರೇಡ್‌ನಲ್ಲಿ ಯಾಸ್ತಿಕಾ ಭಾಟಿಯಾ, ರಾಧಾ ಯಾದವ್, ಶ್ರೇಯಾಂಕಾ ಪಾಟೀಲ್, ಟೈಟಾಸ್ ಸಾಧು, ಅರುಂಧತಿ ರೆಡ್ಡಿ, ಅಮನ್‌ಜೋತ್ ಕೌರ್, ಉಮಾ ಚೆಟ್ರಿ, ಸ್ನೇಹ್ ರಾಣಾ ಮತ್ತು ಪೂಜಾ ವಸ್ತ್ರಾಕರ್ ಸೇರಿದಂತೆ 9 ಆಟಗಾರ್ತಿಯವರು ಸಿ ಗ್ರೇಡ್‌ನಲ್ಲಿದ್ದಾರೆ.