Home Advertisement
Home ಅಪರಾಧ ಟಿಪ್ಪರ್‌ ಅಪಘಾತ: ರಸ್ತೆ ಬದಿ ನಿಂತಿದ್ದ ಓರ್ವ ಸಾವು

ಟಿಪ್ಪರ್‌ ಅಪಘಾತ: ರಸ್ತೆ ಬದಿ ನಿಂತಿದ್ದ ಓರ್ವ ಸಾವು

0
73

ಹುಬ್ಬಳ್ಳಿ: ಟಿಪ್ಪರ್ ಅಪಘಾತದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಓರ್ವ ಸಾವನ್ನಪ್ಪಿದ್ದು, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕುಸುಗಲ್ಲ ರಸ್ತೆಯಲ್ಲಿ ಗುರುವಾರ ನಡೆದಿದೆ.
ಹುಬ್ಬಳ್ಳಿ ತಾಲೂಕಿನ ಚನ್ನಾಪುರದ ನಿಚಾಸಿ ರೆಹಮಾನ್ಸಾಬ್ ಕೆರಿಮನಿ(30) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜೊತೆಗಿದ್ದ ಬ್ಯಾಹಟ್ಟಿ ಪ್ಲಾಟ್ ನಿವಾಸಿ ಅಲ್ಲಾಭಕ್ಷ ಗದಗಕರ್ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕುಸುಗಲ್ ರಸ್ತೆಯಲ್ಲಿರುವ ಸಿದ್ಧಾರೂಢ ಮಠದ ಹತ್ತಿರ ವಾಹನದ ಹತ್ತಿರ ನಿಂತಾಗ ಟಿಪ್ಪರ್ ಗುದ್ದಿದೆ ಎನ್ನಲಾಗಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಜನವರಿ ಮೊದಲನೇ ವಾರದಲ್ಲಿ ಮೇಯರ್‌ ಚುನಾವಣೆ?
Next articleರಾಜ್ಯದಲ್ಲಿ ಕಾಂಗ್ರೆಸ್‌ ಉಳಿಯಲು ಸಾಧ್ಯವಿಲ್ಲ-ಸಚಿವ ಗೋವಿಂದ ಕಾರಜೋಳ