ಪ್ರಯಾಣಿಕರಿದ್ದ ಬಸ್ಸಿನಲ್ಲಿ ಬೆಂಕಿ: ಸುಟ್ಟು ಕರಕಲಾದ ಬಸ್‌

ಬೀದರ್‌: ಬೀದರದಿಂದ- ಔರಾದ ಕಡೆ ಸಾಗುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ, ನೋಡ ನೋಡುತ್ತಿದಂತೆ ಬಸ್ ಸುಟ್ಟು ಕರಕಲಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
ಇಂದು 11:15 ಗಂಟೆಯ ಸುಮಾರಿಗೆ ಬೀದರದಿಂದ- ಔರಾದ ಕಡೆ NEKSRTC ಔರಾದ ಡಿಪೋ ಬಸ್ ಸುಮಾರು 25 ಜನ ಪ್ರಯಾಣಿಕೆನ್ನು ಕರೆದುಕೊಂಡು ಹೋಗುವಾಗ ಔರಾದ ತಾಲೂಕಿ ಕಪ್ಪಿಕೆರೆ ಗ್ರಾಮ ಕ್ರಾಸ್ ಹತ್ತಿರ ಒಮ್ಮೆಲೆ ಬಸ್ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ, ಇಂಜಿನ್‌ನಲ್ಲಿ ಹೊಗೆ, ಬೆಂಕಿ ಕಾಣಿಸುತ್ತಿದ್ದಂತೆ ತುಂಬಿಕೊಂಡಿದ್ದ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಲಾಗಿದೆ. ಚಾಲಕ ಮತ್ತು ನಿರ್ವಾಹಕರ ಸಮಯ ಪ್ರಜ್ಞೆಯಿಂದಾಗಿ ಅದೃಷ್ಟವಶಾತ್ ಯಾರಿಗೆ ತೊಂದರೆ ಆಗಿಲ್ಲ ಎನ್ನಲಾಗಿದೆ. ಸದ್ಯ ಬಸ್‌ ಭಾಗಶಃ ಸುಟ್ಟು ಕರಕಲಾಗಿದೆ.ಇನ್ನು ಮಾಹಿತಿ ತಿಳಿದು ಸಂತಪೂರ ಪೊಲೀಸರು ಘಟನೆ ಸ್ಥಳಕ್ಕೆ ಬಂದು ಔರಾದ್ ಅಗ್ನಿಶಾಮಕ ದಳದವರು ಕರೆಸಿ, ಬೆಂಕಿಯನ್ನು ಆರಿಸಲಾಗಿದೆ. ಅದೃಷ್ಟವಶಾತ್ ಯಾರಿಗೆ ತೊಂದರೆ ಆಗಿಲ್ಲ ಎನ್ನಲಾಗಿದೆ. ಸದ್ಯ ಬಸ್‌ ಭಾಗಶಃ ಸುಟ್ಟು ಕರಕಲಾಗಿದೆ.