ಅಪಘಾತ: ಧಾರವಾಡದ ಇಬ್ಬರು ಯುವಕರು ಸಾವು

0
48

ಮಂಗಳೂರು: ಮೂಲ್ಕಿ ಸಮೀಪದ ಬಟ್ಟಕೋಡಿ ಎಂಬಲ್ಲಿ ಕಳೆದ ರಾತ್ರಿ ಸಂಭವಿಸಿದ ಅಪಘಾತ ನಡೆದಿದ್ದು ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದು ಧಾರವಾಡ ಮೂಲದ ಯುವಕರಿಬ್ಬರು ಸಾವಿಗೀಡಾಗಿದ್ದಾರೆ.
ಮೃತರನ್ನು ಮೂಲತಃ ಧಾರವಾಡ ಸವದತ್ತಿ ಕಲ್ಲೂರು ನಿವಾಸಿಗಳಾದ ಸದ್ಯ ಮೂಲ್ಕಿಯಲ್ಲಿ ವಾಸವಾಗಿರುವ ನವೀನ್ (೨೬) ಆತ್ಮಾನಂದ (೨೭) ಎಂದು ಗುರುತಿಸಲಾಗಿದೆ, ಬೈಕ್‌ನಲ್ಲಿ ಅತೀ ವೇಗವಾಗಿ ಬಂದು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ನಜ್ಜು ಗುಜ್ಜಾಗಿದೆ. ಬೈಕ್ ಸವಾರ ಆತ್ಮಾನಂದ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರ ಗಾಯಗೊಂಡಿದ್ದ ನವೀನ್ ನನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಕಾರಿಯಾಗದೇ ನವೀನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಯುವಕರಿಬ್ಬರು ಪದ್ಮನೂರಿನಿಂದ ಕಿನ್ನಿಗೋಳಿಯತ್ತ ತೆರಳುತಿದ್ದಾಗ ಅಪಘಾತ ನಡೆದಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Previous articleಮತದಾರ ಗುರುತಿನ ಚೀಟಿಗೆ ಆಧಾರ್ ಕಾರ್ಡ್‌ ಲಿಂಕ್
Next articleಆರೆಸ್ಸೆಸ್ ಬಗ್ಗೆ ಲಘು ಹೇಳಿಕೆ ಕಾಂಗ್ರೆಸ್ ಗೆ ಫ್ಯಾಶನ್ ಆಗಿದೆ