ಅಪಘಾತ: ಯಲ್ಲಮ್ಮನ ದೇವಸ್ಥಾನಕ್ಕೆ ಹೊರಟಿದ್ದ ಇಬ್ಬರು ಸಾವು, ಮೂವರಿಗೆ ಗಾಯ

ಬೆಳಗಾವಿ: ಕುಟುಂಬಸ್ಥರೊಂದಿಗೆ ಸವದತ್ತಿಯ ಯಲ್ಲಮ್ಮ ದೇವಿಯ ದರ್ಶನಕ್ಕೆ ಹೋದಾಗ ದುರಂತ ಘಟನೆ ನಡೆದಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಲಕ ಮತ್ತು ಇತರ ಮೂವರು ಗಂಭೀರವಾಗಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಚಿಕ್ಕೋಡಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕ್ಕೋಡಿ-ಸಾಂಗ್ಲಿ ರಸ್ತೆಯ ಅಂಕಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸಿದ್ಧಾಪುರ ವಾಡಿ ಗ್ರಾಮದ ಬಳಿ ಇಂದು ಅಪಘಾತ ಸಂಭವಿಸಿದೆ. ಈ ಘಟನೆಯಲ್ಲಿ ತುಕಾರಾಂ ಕೋಳಿ(೭೨) ಸಾಂಗ್ಲಿಯ ಕಲ್ಪನಾ ಅಜಿತ್ ಕೋಳಿ(೩೨) ಇಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಸಾಂಗ್ಲಿಯ ಕೋಲಿ ಕುಟುಂಬವು ಮಾರುತಿ ವ್ಯಾನ್‌ನಲ್ಲಿ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಬರುತ್ತಿದ್ದರು. ಈ ಸಂದರ್ಭದಲ್ಲಿ ಬೆಳಗಾವಿಯಿಂದ ಪಲುಸ್‌ಗೆ ಬರುತ್ತಿದ್ದ ಕಾಂಕ್ರೀಟ್ ಲಾರಿಗೆ ಸೈಡ್ ಕೊಡುವ ವೇಳೆ ವ್ಯಾನ್ ಟ್ರಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ವ್ಯಾನ್‌ನಲ್ಲಿದ್ದವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ತಕ್ಷಣವೇ ಚಿಕ್ಕೋಡಿ ಆಸ್ಪತ್ರೆಗೆ ಸಾಗಿಸುವ ವೇಳೆ ದಾರಿಯಲ್ಲಿಯೇ ಇಬ್ಬರು ಕೊನೆಯುಸಿರೆಳೆದಿದ್ದಾರೆ.
ಗಾಯಗೊಂಡಿದ್ದ ರುಕ್ಮಣಿ ಕೋಳಿ(೬೨), ಅನುಜ್ ಕೋಳಿ( ೩೨) ಅನುಜ್ ಕೋಳಿ(೧೧) ಆದಿತ್ಯ ಕೋಳಿ ಹಾಗೂ ವಾಹನ ಚಾಲಕ ಗಂಭೀರ ಗಾಯಗೊಂಡಿದ್ದು, ಅವರನ್ನು ಚಿಕ್ಕೋಡಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಲಿ ಪೊಲೀಸ್ ಠಾಣೆಯ ಫೌಜ್ದಾರ್ ನಂದೇಶ್ ಮತ್ತು ಸಿಬ್ಬಂದಿ ಅನಿಲ್ ಸಪ್ಸಾಗರೆ, ರಾಮಚಂದ್ರ ಖೋಟ್ ಮತ್ತು ಇತರ ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.