ಗೋವುಗಳ ಅಕ್ರಮ ಸಾಗಾಟ ತಡೆದ ಪ್ರಮೋದ್ ಮುತಾಲಿಕ್

0
36

ದಾವಣಗೆರೆ: ಗೋವುಗಳನ್ನು ಅಕ್ರಮವಾಗಿ ಕಸಾಯಿಖಾನೆಗಳಿಗೆ ಸಾಗಾಟ ಮಾಡುತ್ತಿದ್ದ ವಾಹನವನ್ನು ದಾವಣಗೆರೆ ಹಳೇ ಕುಂದುವಾಡ ರಾಷ್ಟ್ರೀಯ ಹೆದ್ದಾರಿಯಲ್ಲಿ ಶ್ರೀರಾಮಸೇನೆಯ ರಾಷ್ಟಿçÃಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಡೆದು ಗೋವುಗಳನ್ನು ರಕ್ಷಣೆಮಾಡಿದ್ದಾರೆ.

ಹುಬ್ಬಳ್ಳಿಯಿಂದ ದಾವಣಗೆರೆಗೆ ಆಗಮಿಸುತ್ತಿದ್ದ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೆದ್ದಾರಿಯಲ್ಲಿ ರಾಷ್ಟಿçÃಯ ಹೆದ್ದಾರಿಯಲ್ಲಿ ಬರುವ ವೇಳೆ ಅನುಮಾನಗೊಂಡು ವಾಹನ ನಿಲ್ಲಿಸಿ ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಸಣ್ಣ ವಾಹನದಲ್ಲಿ ನಾಲ್ಕು ದೊಡ್ಡ ಹಸು ತುಂಬಿಕೊAಡು ಸಾಗಿಸಲಾಗುತ್ತಿತ್ತು. ಚಾಲಕನನ್ನು ವಿಚಾರಿಸಿದಾಗ ದಾಖಲೆ ಇಲ್ಲದೇ ಹಸುಗಳ ಸಾಗಟ ಯತ್ನ ನಡೆಯುತ್ತಿತ್ತು. ಖುದ್ದು ನಿಂತು ಮುತಾಲಿಕ್ ವಿದ್ಯಾನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ವಿದ್ಯಾನಗರ ಪೊಲೀಸ್ ಠಾಣೆಯ ಎಸ್‌ಐ ಶಿಲ್ಪಾ ಆಗಮಿಸಿ ಪರಿಶೀಲನೆ ನಡೆಸಿದರು.

ಇದೇ ವೇಳೆ ಮಾತನಾಡಿದ ಮುತಾಲಿಕ್, ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಇದ್ದರೂ ಅಕ್ರಮವಾಗಿ ಗೋವುಗಳನ್ನು ಕಸಾಯಿಖಾನೆಗೆ ಸಾಗಾಟ ಮಾಡುತ್ತಿರುವುದು ವಿರೋಧನೀಯವಾಗಿದ್ದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದಲೇ ಗೋವುಗಳಿಗೆ, ಜನಸಾಮಾನ್ಯರಿಗೆ ರಕ್ಷಣೆ ಇಲ್ಲದಂತಾಗಿದೆ. ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕೆಂದು ಆಗ್ರಹಿಸಿದರು.

Previous articleವಿಜಯೇಂದ್ರ ಇನ್ನೊಮ್ಮೆ ನಾಡಗೀತೆ ಓದಲಿ
Next articleಅಪ್ರಾಪ್ತೆಗೆ ಲೈಂಗಿಕ ಕಿರುಕುಳ: ಬಂಧಿತ ವ್ಯಕ್ತಿ ಜೈಲಿನಲ್ಲಿ ಆತ್ಮಹತ್ಯೆ