ಭದ್ರಾ ನದಿಯಲ್ಲಿ ಮುಳುಗಿ ಯುವಕರಿಬ್ಬರ ಸಾವು

0
25

ಕಳಸ: ಪ್ರವಾಸಕ್ಕೆ ಬಂದಿದ್ದ ರಾಜಸ್ತಾನಿ ಯುವಕರ ಪೈಕಿ ಇಬ್ಬರು ಭದ್ರಾ ನದಿಯಲ್ಲಿ ಮುಳುಗಿ ಸಾವಿಗೀಡಾದ ದಾರುಣ ಘಟನೆ ಇಂದು ಮಧ್ಯಾಹ್ನ ವಶಿಷ್ಟಾಶ್ರಮದಲ್ಲಿ ನಡೆದಿದೆ.

ಸಂಜೀವ ಮೆಟ್ಟಿಲಿನ ತೂಗುಸೇತುವೆ ಬಳಿ ಈ ದುರ್ಘಟನೆ ನಡೆದಿದೆ.ಬೆಂಗಳೂರಿನಲ್ಲಿ ಚಿನ್ನದ ಕೆಲಸ ಮಾಡುವ ರಾಜಸ್ತಾನ ಮೂಲದ ಯುವಕರಾದ ಜಗದೀಶ್(33) ಮತ್ತು ಚೋಟಾ ಸಿಂಗ್(28) ಮೃತ ದುರ್ದೈವಿಗಳು.

ಹೋಳಿ ರಜೆ ಕಾರಣಕ್ಕೆ 2 ಕಾರಿನಲ್ಲಿ ಶನಿವಾರ ಕಳಸಕ್ಕೆ ಬಂದಿದ್ದ 12 ಯುವಕರು ಕಳಸ ಸುತ್ತಮುತ್ತಲಿನ ಪ್ರೇಕ್ಷಣೀಯ ಸ್ಥಳಗಳಲ್ಲಿ ಅಡ್ಡಾಡಿದರು.ಬೆಂಗಳೂರಿಗೆ ಭಾನುವಾರ ಬೆಳಿಗ್ಗೆ ಮರಳುವ ಮೊದಲು ವಶಿಷ್ಟಾಶ್ರಮದ ತೂಗುಸೇತುವೆ ನೋಡಲು ಹೋಗಿದ್ದಾರೆ.

10 ಗೆಳೆಯರು ತೂಗುಸೇತುವೆ ನೋಡಲು ಹೋದಾಗ ಇಬ್ಬರು ಯುವಕರು ನೀರಿನಲ್ಲಿ
ಈಜಾಡಲು ಇಳಿದಿದ್ದಾರೆ.ಈಜು ಬಾರದ ಇಬ್ಬರೂ ನೀರಿಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.ಇಬ್ಬರ ಮೃತದೇಹವನ್ನೂ ನೀರಿನಿಂದ ಮೇಲಕ್ಕೆ ಎತ್ತಲಾಗಿದೆ. ಮುಳುಗುತಜ್ಞ ಭಾಸ್ಕರ್ ನೆರವು ನೀಡಿದರು.ಕಳಸ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Previous articleಈಜಲು ಹೋಗಿದ್ದ ಯುವಕರಿಬ್ಬರ ಸಾವು
Next articleವಿಜಯೇಂದ್ರ ಇನ್ನೊಮ್ಮೆ ನಾಡಗೀತೆ ಓದಲಿ