ಕಮಲಾಪುರ (ಕಲಬುರಗಿ): ಕಮಲಾಪುರ ತಾಲೂಕಿನ ಮರಗುತ್ತಿ ಗ್ರಾಪಂ ಸದಸ್ಯ ನೀಲಕಂಠ ರಾಠೋಡ್ ವಿರುದ್ಧ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ
ಬಡತನ ರೇಖೆಗಿಂತ ಕೆಳಗಿರುವ ಬಡ ಜನತೆಗಾಗಿ ರೂಪಿಸಲಾದ ಸರ್ಕಾರದ ವಸತಿ ಯೋಜನೆ ಅಡಿ ಮನೆ ಮಂಜೂರು ಮಾಡಿಸಿಕೊಡುವಂತೆ ಮಹಿಳೆಯೊಬ್ಬರು ಗ್ರಾಮ ಪಂಚಾಯಿತಿ ಗೆ ಬೇಡಿಕೆ ಇಟ್ಟಿದಕ್ಕೆ, ಗ್ರಾಮ ಪಂಚಾಯಿತಿ ಸದಸ್ಯನಾಗಿರುವ ನೀಲಕಂಠ ನಿನಗೆ ಮನೆ ಮಾಡಿಸಿಕೊಡಬೇಕೆಂದರೆ ತನ್ನ ಜೊತೆ ಮಲಗಬೇಕು. ನೀನು ಬರದಿದ್ದರೆ ನಿನ್ನ ಮಗಳನ್ನು ಕಳುಹಿಸು ಎಂದಿದ್ದಾನಂತೆ. ಇದರಿಂದ ನೀಲಕಂಠ ರಾಠೋಡ್ ವಿರುದ್ಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಎಸ್ಐ ಸಂಗೀತಾ ಸಿಂಧೆ ತಿಳಿಸಿದ್ದಾರೆ.