ಸುನಿತಾ ವಿಲಿಯಮ್ಸ್​​ ಭೂಮಿಗೆ ಬರುವುದು ಮತ್ತಷ್ಟು ವಿಳಂಬ

ನವದೆಹಲಿ: ರಾಕೆಟ್‌ನ ಲಾಂಚ್‌ಪ್ಯಾಡ್‌ನಲ್ಲಿ ಕೊನೆಯ ಕ್ಷಣದ ತಾಂತ್ರಿಕ ಸಮಸ್ಯೆಯಿಂದಾಗಿ ಸ್ಪೇಸ್‌ಎಕ್ಸ್ ಹಾರಾಟವನ್ನು ರದ್ದುಗೊಳಿಸಿದ್ದರಿಂದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲೋರ್ ಭೂಮಿಗೆ ವಾಪಸ್ ಆಗುವುದು ವಿಳಂಬವಾಗಿದೆ.
ಕಳೆದ ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಸಿಲುಕಿಕೊಂಡಿರುವ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲೋರ್ ಭೂಮಿಗೆ ವಾಪಸ್ ಆಗುವುದು ಇನ್ನಷ್ಟು ವಿಳಂಬವಾಗಿದೆ.
ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಬುಧವಾರ ಸಂಜೆ ಫಾಲ್ಕನ್ ರಾಕೆಟ್ ಉಡ್ಡಯನದ ನಿರ್ಣಾಯಕ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ದೋಷ ಕಾಣಿಸಿಕೊಂಡಿದ್ದರಿಂದ. ಉಡ್ಡಯನ ಸ್ಥಗಿತತಗೊಂಡಿತ್ತು, ನಾಸಾ ಕಳುಹಿಸುತ್ತಿರುವ ಗಗನಯಾನಿಗಳು ಐಎಸ್‌ಎಸ್ ತಲುಪಿದ ನಂತರ, ಸುನಿತಾ ಹಾಗೂ ಬುಚ್ ಅವರು ಭೂಮಿಯತ್ತ ಪಯಣ ಆರಂಭಿಸಬೇಕಿದೆ. ಹೊಸ ಉಡಾವಣಾ ದಿನಾಂಕವನ್ನು ಇನ್ನು ಘೋಷಿಸಿಲ್ಲ.