Home Advertisement
Home ಅಪರಾಧ ಪಲ್ಟಿಯಾದ ಸಾರಿಗೆ ಬಸ್‌ ಹಲವರಿಗೆ ಗಾಯ

ಪಲ್ಟಿಯಾದ ಸಾರಿಗೆ ಬಸ್‌ ಹಲವರಿಗೆ ಗಾಯ

0
157

ಕೊಪ್ಪಳ : ಕೆಕೆಆರ್‌ಟಿಸಿ ಬಸ್‌ ಪಲ್ಟಿಯಾಗಿ, 20ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಗಾಯವಾದ ಘಟನೆ ನಡೆದಿದೆ.
ಜಿಲ್ಲೆಯ ಅಳವಂಡಿ ಸಮೀಪದ ಹೈದರನಗರ ಮತ್ತು ಹಟ್ಟಿ ಗ್ರಾಮದ ನಡುವೆ ಹಟ್ಟಿ- ಹೈದರ್ ನಗರದಿಂದ ಹೊರಟಿದ್ದ ಕೆಎಸ್ಸಾರ್ಟಿಸಿ ಬಸ್ ಪಲ್ಟಿಯಾಗಿದೆ, ಬಸ್‌ನಲ್ಲಿ ವಿದ್ಯಾರ್ಥಿಗಳು ಸೇರಿದಂತೆ 70 ಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಿದ್ದರು, ಹಟ್ಟಿ ಹಾಗೂ ಹೈದರನಗರ ರಸ್ತೆ ಕಾಮಗಾರಿ ಮಾಡಲು ಸಂಪೂರ್ಣ ರಸ್ತೆಯನ್ನು ಅಗೆಯಲಾಗಿದೆ. ರಸ್ತೆಯ ಬದಿಯಲ್ಲಿ ಮಣ್ಣು ಹಾಕಲಾಗಿತ್ತು. ಅಧಿಕಾರಿಗಳು, ರಸ್ತೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಈ ರೀತಿಯ ಘಟನೆಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಪಲ್ಟಿಯಾದ ಬಸ್‌ನಲ್ಲಿ ಗಾಯಗೊಂಡಿರುವ ಪ್ರಯಾಣಿಕರು ಹಾಗೂ ವಿದ್ಯಾರ್ಥಿಗಳನ್ನು ಆಂಬುಲೆನ್ಸ್ ಮೂಲಕ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

Previous articleಹೈಸ್ಪೀಡ್ ಇಂಟರ್ನೆಟ್: ಸ್ಟಾರ್​ಲಿಂಕ್ ಜೊತೆ ಸೇರಿದ ಏರ್​ಟೆಲ್, ಜಿಯೋ
Next articleಹುಬ್ಬಳ್ಳಿ-ಚಿತ್ರದುರ್ಗ-ಹುಬ್ಬಳ್ಳಿ ಎಕ್ಸ್ ಪ್ರೆಸ್ ರೈಲು ಸಂಚಾರ ಭಾಗಶಃ ರದ್ದತಿ ಮುಂದುವರಿಕೆ