ನರ್ಸಿಂಗ್ ವಿದ್ಯಾರ್ಥಿನಿ ಕಿಡ್ನಾಪ್ ಕೇಸ್‌ಗೆ ಬಿಗ್ ಟ್ವಿಸ್ಟ್

0
22

ಬೆಳಗಾವಿ: ನನ್ನನ್ನು ಯಾರೂ ಅಪಹರಣ ಮಾಡಿಲ್ಲ. ನಾನು ನನ್ನ ಸ್ವಂತ ಖುಷಿಯಿಂದಲೇ ಸದ್ರುದ್ದೀನ್ ಜತೆ ಹೋಗಿದ್ದೇನೆ. ನಾವಿಬ್ಬರೂ ಕಳೆದೆರಡು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗುತ್ತಿದ್ದೇವೆ ಎಂದು ಪೊಲೀಸರ ಮುಂದೆ ನಿರರ್ಗಳವಾಗಿ ಹೇಳಿಕೊಳ್ಳುವ ಮೂಲಕ ಬೆಳಗಾವಿಯ ನರ್ಸಿಂಗ್ ವಿದ್ಯಾರ್ಥಿನಿ ಅಪಹರಣ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ನೀಡಿದ್ದಾರೆ.
ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಿಯಕರನೊಂದಿಗೆ ಪ್ರತ್ಯಕ್ಷವಾದ ಮಗಳನ್ನು ಕಂಡು ತಾಯಿ ದೀಪಾಗೆ ಆಘಾತವಾಗಿದೆ. ಮಗಳು ಕಿಡ್ನಾಪ್ ಆಗಿರುವ ಬಗ್ಗೆ ಈಗಾಗಲೇ ಠಾಣೆಗೆ ದೂರು ನೀಡಿದ್ದು ಮಗಳನ್ನು ಹುಡುಕಿ ಕೊಡುವಂತೆ ಅವರು ಮನವಿ ಮಾಡಿದ್ದರು. ಯುವತಿಯ ಗ್ರಾಮದಲ್ಲಿಯೇ ಗೌಂಡಿ ಕೆಲಸ ಮಾಡುತ್ತಿದ್ದ ಸದ್ರುದ್ದೀನ್ ಬೇಪಾರಿ ಎಂಬಾತನ ಜತೆ ಈಕೆ ಪರಾರಿಯಾಗಿರುವುದರ ಬಗ್ಗೆ ಮಾಹಿತಿ ಅರಿತ ಪೊಲೀಸರು ಮುಂಬೈಯಿಂದ ಇಬ್ಬರನ್ನೂ ಬೆಳಗಾವಿಗೆ ಕರೆತಂದಿದ್ದರು.
ಆದರೆ ಠಾಣೆಯಲ್ಲಿ ಅಪಹರಣದ ಆರೋಪ ತಳ್ಳಿ ಹಾಕಿದ ೧೯ರ ಯುವತಿ ನಾನು ಸ್ವ ಇಚ್ಛೆಯಿಂದಲೇ ಆತನೊಂದಿಗೆ ಮುಂಬೈಗೆ ಹೋಗಿದ್ದೆ. ಈಗಲೂ ಆತನೊಂದಿಗೆ ಮುಂದಿನ ಬದುಕು ಕಟ್ಟಿಕೊಳ್ಳುತ್ತೇನೆ. ತಾಯಿ ಮನೆಗೆ ಬರುವುದಿಲ್ಲ ಎಂದು ಹೇಳಿಕೊಂಡಿದ್ದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಆತನ ಜತೆಗೆ ಕಳುಹಿಸಿಕೊಟ್ಟಿದ್ದಾರೆ.

ಕುಸಿದು ಬಿದ್ದ ತಾಯಿ:
ಈ ಪ್ರೀತಿ, ಪ್ರೇಮವೆಲ್ಲಾ ಬರೀ ಜಾಲ ಮಗಳೇ, ಬೇಡ ಬಿಟ್ಟು ಬಿಡು. ಆದದ್ದು ಆಗಿದೆ ನನ್ನ ಜತೆ ಬಂದು ಬಿಡು ಎಂದು ಮಗಳನ್ನು ಪರಿಪರಿಯಾಗಿ ತಾಯಿ ದೀಪಾ ಬೇಡಿಕೊಂಡರೂ ಆಕೆಯ ಹೃದಯ ಕರಗಲಿಲ್ಲ. ನಾನು ಯಾವುದೇ ಕಾರಣಕ್ಕೂ ಮರಳಿ ಬರುವುದಿಲ್ಲ. ಆತನ ಜತೆ ನಾನು ಸುಖವಾಗಿರುತ್ತೇನೆ ಎಂದು ಹೇಳಿದ್ದಾಳೆ.

Previous articleಲಾರಿ ಅಪಘಾತ, ಇಬ್ಬರ ಸಾವು
Next articleದಂಪತಿ ಜಗಳ: ಬೈಕ್‌ಗೆ ಬೆಂಕಿಯಿಟ್ಟ ಭೂಪ