ಕೇಂದ್ರದ ಖಜಾನೆ ದಿವಾಳಿ ಆಗಿದೆಯೇ?

0
26

ಬಿಜೆಪಿ ನಾಯಕರು ನೀಡುವ ಉತ್ತರವೇನು?

ಬೆಂಗಳೂರು: ನರೇಗಾ ಯೋಜನೆಯಲ್ಲಿ ಬೆವರು ಸುರಿಸಿದ ಕನ್ನಡಿಗರ ಕೂಲಿ ಕೊಡದೆ ಸತಾಯಿಸುತ್ತಿದೆ ಕೇಂದ್ರ ಸರ್ಕಾರ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಇದು ರಾಜ್ಯದ ಬಿಜೆಪಿ ನಾಯಕರ ಗಮನಕ್ಕಿಲ್ಲವೇ? ಈ ಅನ್ಯಾಯದ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸುವುದಿಲ್ಲವೇ? ನರೇಗಾ ಬಾಕಿ ಬಿಡುಗಡೆ ಮಾಡುವಂತೆ ಈಗಾಗಲೇ ಪತ್ರ ಬರೆದಿದ್ದೇವೆ, ಈಗಲೂ ಮತ್ತೊಮ್ಮೆ ಬರೆದಿದ್ದೇವೆ, ಹೀಗಿದ್ದೂ ಹಣ ಬಿಡುಗಡೆ ಮಾಡದಿರುವುದಕ್ಕೆ ಕಾರಣವೇನು? ಕೇಂದ್ರದ ಖಜಾನೆ ದಿವಾಳಿ ಆಗಿದೆಯೇ? ಅಥವಾ ಕನ್ನಡಿಗರ ಮೇಲಿನ ದ್ವೇಷಕ್ಕೆ ಅನುದಾನಗಳಲ್ಲಿ ‘ಹಲಾಲ್ ಕಟ್‘ ಮಾಡುತ್ತಿದೆಯೇ?

ಬೆವರು ಸುರಿಸಿದ ಕನ್ನಡಿಗರು ಕೂಲಿ ಕೇಳುತ್ತಿದ್ದಾರೆ, ಕೇಂದ್ರ ಸರ್ಕಾರದ ಪರ ವಕಾಲತ್ತು ವಹಿಸುವ ಕರ್ನಾಟಕ ಬಿಜೆಪಿ ನಾಯಕರು ನೀಡುವ ಉತ್ತರವೇನು? ಎಂದು ಪ್ರಶ್ನಿಸಿದ್ದಾರೆ.

Previous articleರಸ್ತೆಗಳು, ವಿಶ್ವವಿದ್ಯಾಲಯಗಳು ಬಾಯ್ತೆರೆದು ಉಸಿರಾಡುತ್ತಿವೆ
Next articleಪ್ರಧಾನಿ ಮೋದಿ ಮನ್ ಕೀ ಬಾತ್‌ನಲ್ಲಿ ಪ್ರಸ್ತಾಪವಾಗಿದ್ದ ಸಾಹಿತಿ ಡಾ.ಕಾವೇಂಶ್ರೀ ಅಸ್ತಂಗತ