ಮಸೀದಿಯಲ್ಲಿ ಬಾಂಬ್ ಸ್ಫೋಟ

0
28

ಐವರು ಸಾವು, 20 ಜನರಿಗೆ ಗಾಯ

ಪಾಕಿಸ್ತಾನ: ಮದರಸಾವೊಂದರಲ್ಲಿ ಪ್ರಾರ್ಥನೆಯ ವೇಳೆ ಆತ್ಮಾಹುತಿ ಬಾಂಬ್​ ಸ್ಫೋಟಗೊಂಡು ಐದು ಮಂದಿ ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ನಡೆದಿದೆ.
ಖೈಬರ್​ ಪಖ್ತುಂಖ್ವಾ ಪ್ರಾಂತ್ಯದ ನೌಶೆರ್​ ಜಿಲ್ಲೆಯ ಮದರಸಾದಲ್ಲಿ ಈ ಘಟನೆ ನಡೆದಿದೆ, ಬಾಂಬ್ ಸ್ಫೋಟದಲ್ಲಿ ಮದರಸಾ ಮೇಲ್ವಿಚಾರಕರು ಹಾಗೂ ಜಮಿಯರ್​ ಉಲೇಮಾ ಇಸ್ಲಾಂ ಹಮಿದುಲ್​ ಹಕ್​ಹಕ್ಕಾನಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ, ಈ ಸ್ಫೋಟವು ಆತ್ಮಾಹುತಿ ಬಾಂಬ್ ದಾಳಿಯಾಗಿರಬಹುದು ಎಂದು ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದು, ಶವಗಳನ್ನು ಹೊರತೆಗೆಯಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನೌಶೇರಾ ಮತ್ತು ಪೇಶಾವರ ಎರಡೂ ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

Previous articleಕಾಂಗ್ರೆಸ್‌ನವರಿಗೆ ವಿಕಸಿತ ಭಾರತ ಸಹಿಸಿಕೊಳ್ಳಲು ಆಗುತ್ತಿಲ್ಲ
Next articleಗದಗ-ಬೆಟಗೇರಿ ನಗರಸಭೆಯಲ್ಲಿ ಕಾಂಗ್ರೆಸ್‌ನಿಂದ ಪ್ರಜಾಪ್ರಭುತ್ವದ ಕಗ್ಗೊಲೆ