ತೆಂಗಿನ ತೋಟಕ್ಕೆ ಆನೆ ದಾಳಿ

0
25

ತೋಟಕ್ಕೆ ಲಗ್ಗೆ ಇಟ್ಟ ಆನೆ ಹಿಂಡು: ತೆಂಗಿನ ಮತ್ತು ಅಡಿಕೆ ಮರಗಳು ನಾಶ

ಶಿರಸಿ: ಮಾನವ ಹಾಗೂ ಕಾಡು ಪ್ರಾಣಿಗಳ ಸಂಘರ್ಷ ಇಂದು‌ ನಿನ್ನೆಯದಲ್ಲ. ಇದು ಅನಾದಿ ಕಾಲದಿಂದಲೂ ಬೆಳೆದುಕೊಂಡು ಬಂದಿದೆ. ಈ ನಡುವೆ ತಾಲೂಕಿನಲ್ಲಿ ಆನೆ ದಾಳಿ ಮತ್ತೆ ಆರಂಭವಾಗಿದ್ದು
ಬೆಂಗಳೆ ಗ್ರಾಮದ ಭಾಗದಲ್ಲಿ ರೈತರು ಆನೆ ಹಾವಳಿಯಿಂದ ಹೈರಾಣಾಗಿದ್ದಾರೆ. ತಾಲೂಕಿನಲ್ಲಿ ಆನೆ ದಾಳಿಯಿಂದ ರೈತರ ನಿದ್ದೆ ಗೆಡಿಸುವಂತೆ ಮಾಡಿದೆ. ಗ್ರಾಮದ ವೆಂಕಟೇಶ ಹೆಗಡೆ ಈ ಕುರತಂತೆ ಮಾಹಿತಿ ನೀಡಿ ಬೆಂಗಳೆ ಗ್ರಾಮದ ಒಣಿಕೇರಿಯಲ್ಲಿರುವ ಗಣಪತಿ ಗುರುನಾಥ ಹೆಗಡೆ ಇವರಿಗೆ ಸೇರಿದ ತೆಂಗಿನ ಮತ್ತು ಅಡಿಕೆ ತೋಟಕ್ಕೆ ಲಗ್ಗೆಯಿಟ್ಟಿರುವ ಆನೆಗಳ ಹಿಂಡು 40 ಕ್ಕೂ ಹೆಚ್ಚಿನ ತೆಂಗಿನ ಮರಕ್ಕೆ ಹಾನಿಮಾಡಿದೆ ಎಂದರು.

Previous articleವಕೀಲರಿಗೆ ಬರಬೇಕಾದ ಶುಲ್ಕವನ್ನು ಪಾವತಿ ಮಾಡಿ
Next articleಮೈಸೂರು ಚಲೋ: ಪ್ರತಿಭಟನೆಗೆ ಷರತ್ತುಬದ್ಧ ಅನುಮತಿ