ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಹುಮನಾಬಾದ್ ಶ್ರೀವೀರಭದ್ರೇಶ್ವರ ದೇವಸ್ಥಾನ ಭೂಮಿ ಸರ್ವೆ

ಹುಮನಾಬಾದ್(ಬೀದರ್ ಜಿಲ್ಲೆ): ಜಿಲ್ಲಾ ಆಡಳಿತ ಸೂಚನೆ ಮೇರೆಗೆ ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀವೀರಭದ್ರೇಶ್ವರ ದೇವಸ್ಥಾನದ ಭೂಮಿಯನ್ನು ಉಪವಿಭಾಗಾಧಿಕಾರಿ ಮುಕುಲ್ ಜೈನ್ ಅವರ ನೇತೃತ್ವದಲ್ಲಿ ಸೋಮವಾರ ಬೆಳಿಗ್ಗೆ 11:30ಕ್ಕೆ ಸರ್ವೆ ಕೈಗೊಳ್ಳಲಾಯಿತು.
ಜಿಲ್ಲಾ ಆಡಳಿತ ವೀರಭದ್ರೇಶ್ವರ ದೇವಸ್ಥಾನ ಭೂಮಿ ಸರ್ವೆ ಕೈಗೊಂಡು ವರದಿ ಸಲ್ಲಿಸಲು ಸೂಚಿಸಿದ ಹೊನ್ನೆಯಲ್ಲಿ ಇಂದು ಸರ್ವೆ ಕೈಗೊಳ್ಳಲಾಗುತ್ತಿದೆ. ಸರ್ವೆ ಕೈಗೊಳ್ಳುವ ಕುರಿತು ಯಾರಾದರೂ ಅರ್ಜಿ ಸಲ್ಲಿಸಿದ್ದರಾ ? ಅಥವಾ ದೂರು ಇತ್ತಾ ಎಂಬ ಸಂಯುಕ್ತ ಕರ್ನಾಟಕ ಪ್ರತಿನಿಧಿ ಕೇಳಿದ ಪ್ರಶ್ನೆಗೆ ಹಾಗೇನಿಲ್ಲ ಅಳತೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಸರ್ವೆ ಕೈಗೊಳ್ಳಲಾಗುತ್ತಿದೆ ಎಂದು ಪ್ರತಿಕ್ರಿಯಿಸಿದರು.
ಜಿಲ್ಲಾ ಯೋಜನಾಧಿಕಾರಿ ಮೋತಿಲಾಲ್ ಲಮಾಣಿ, ತಹಶೀಲ್ದಾರ್ ಅಂಜುಮ್ ತಬಸುಮ್, ಪುರಸಭೆ ಮುಖ್ಯಾಧಿಕಾರಿ ಫಿರೋಜಖಾನ್, ಭೂದಾಖಲೆಗಳ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾರಾಣಿ ಸೇರಿದಂತೆ ಕಂದಾಯ, ಪುರಸಭೆ ಹಾಗೂ ಭೂದಾಖಲೆಗಳ ಇಲಾಖೆ ಎಂಜಿನಿಯರಗಳು, ವಿವಿಧ ಹಂತದ ಅಧಿಕಾರಿ ಹಾಗೂ ಸಿಬ್ಬಂದಿ ಹಾಜರಿದ್ದರು.