ಶಿವಮೊಗ್ಗ: ಇಲ್ಲಿನ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಯುವಕ ಯುವತಿಯ ವಿಡಿಯೋ ಚಿತ್ರೀಕರಿಸಿಕೊಂಡು, ಹಣಕ್ಕಾಗಿ ಬೆದರಿಸಿದ ಆರೋಪ ಸಂಬಂಧ ತುಂಗಾನಗರ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಸಮೀಪದಲ್ಲಿರುವ ಸಕ್ರೆಬೈಲ್‌ನ ಹೋಟೆಲ್‌ವೊಂದಕ್ಕೆ ತನ್ನ ಗೆಳತಿಯ ಜೊತೆ ಕಳೆದ ಹದಿನಾಲ್ಕನೇ ತಾರೀಖು ಬಂದಿದ್ದ. ಈ ವೇಳೆ ಅಲ್ಲಿಗೆ ಬಂದ ನಾಲ್ಕು ಮಂದಿ ಯುವಕ ಯುವತಿ ಇದ್ದ ಟೇಬಲ್‌ಗೆ ಬಂದು ಅದರ ವಿಡಿಯೋ ಮಾಡಿಕೊಂಡು ಅವರಿಬ್ಬರನ್ನು ಅಕ್ಷರಶಃ ಅಲ್ಲಿಂದ ಕಿಡ್ನ್ಯಾಪ್ ಮಾಡಿಕೊಂಡು ಹೋಗಿದ್ದಾರೆ.
ಆಟೋವೊಂದರಲ್ಲಿ ಸುತ್ತಿಸಿ, ಅವರಿಬ್ಬರ ಬಳಿ ಇದ್ದ ದುಡ್ಡು ಕಿತ್ತುಕೊಂಡ ಆರೋಪಿಗಳು ಆನಂತರ ಎಂಆರ್‌ಎಸ್ ಸರ್ಕಲ್ ಬಳಿ ಬಿಟ್ಟು ಒಂದೂವರೆ ಲಕ್ಷ ರೂ. ಕೊಡಬೇಕು, ಕೊಡದಿದ್ದರೇ ನಿಮ್ಮ ವಿಡಿಯೋ ಲೀಕ್ ಮಾಡುವುದಾಗಿ ಹೆದರಿಸಿದ್ದಾರೆ. ಆ ನಂತರ ಪದೇ ಪದೇ ಫೋನ್ ಮಾಡಿ ಹಣ ಕೊಡುವಂತೆ ಹೆದರಿಸಿದ್ದಾರೆ. ಇದರ ನಡುವೆ ಯುವಕ ಆರು ಸಾವಿರ ರೂಪಾಯಿ ತಂದು ಶಿವಮೊಗ್ಗ ಬಸ್ ನಿಲ್ದಾಣದ ಬಳಿ ಕೊಡಲು ಮುಂದಾದಾಗ ಆತನ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿ ಮತ್ತೆ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ.
ಈ ಪ್ರಕರಣದಲ್ಲಿ ಸಕ್ರೆಬೈಲ್ ಕಡೆಗೆ ಹೋಗುವ ಜೋಡಿಗಳನ್ನು ಟಾರ್ಗೆಟ್ ಮಾಡಲಾಯ್ತಾ? ಈ ಹಿಂದೆ ಶಿವಮೊಗ್ಗದ ತಾಲ್ಲೂಕು ಒಂದರಲ್ಲಿ ಇಂತಹುದ್ದೆ ಒಂದು ಗ್ಯಾಂಗ್ ಜೋಡಿಗಳ ಅಶ್ಲೀಲ ವಿಡಿಯೋ ಮಾಡಿ ಅವರನ್ನು ಹಿಂಸಿಸಿದ ಉದಾಹರಣೆ ಇದೆ. ಸಕ್ರೆಬೈಲ್ ನಂತರ ಜನನಿಬಿಡ ಪ್ರದೇಶದಲ್ಲಿ ಯುವಕ ಯುವತಿಯನ್ನು ಒತ್ತಾಯಪೂರ್ವಕವಾಗಿ ಆಟೋದಲ್ಲಿ ಎಳೆದೊಯ್ದಿದಿರುವುದು ಪ್ರಕರಣದಲ್ಲಿ ತೀವ್ರ ಸಂಶಯ ಮೂಡಿಸಿದೆ.