ಅಶೋಕ್ ಹೇಳಿಕೆಗೆ ತಲೆ, ಬಾಲ ಇಲ್ಲ

0
19

ನಾನೇನು ವರ್ಷಕ್ಕೊಮ್ಮೆ ಬರುವ ಉಸ್ತುವಾರಿ ಅಲ್ಲ

ಮಂಗಳೂರು: ನವೆಂಬರ್‌ನಲ್ಲಿ ಸರಕಾರ ಪತನವಾಗುತ್ತೆ ಎಂಬ ಆರ್.ಅಶೋಕ್ ಭವಿಷ್ಯವಾಣಿ ನುಡಿದಿದ್ದಾರೆ. ಅವರ ಹೇಳಿಕೆಗೆ ತಲೆನೂ ಇಲ್ಲ, ಬಾಲನೂ ಇಲ್ಲ. ಅವರ ಪಕ್ಷದವರೇ ಅವರನ್ನು ವಿರೋಧ ಪಕ್ಷದ ನಾಯಕ ಸ್ಥಾನದಿಂದ ಇಳಿಸಲು ಹೊರಟಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದ ನಾಯಕರು ಹೇಳಿಕೆ ಕೊಡಬೇಕು ಎಂದು ಕೊಡುತ್ತಿದ್ದಾರೆ ಅವರ ಪಕ್ಷದಲ್ಲೇ ಅವರಿಗೆ ಯಾವ ರೀತಿ ಪ್ರಾತಿನಿಧ್ಯ ಸಿಗುತ್ತಿದೆ ಎಂದು. ಗೊತ್ತಿಲ್ಲ. ಆರ್. ಅಶೋಕ್ ಎಲ್ಲೂ ತೂಕವಾಗಿ ಮಾತನಾಡುತ್ತಿಲ್ಲ ಸುಮ್ಮನೆ ಹಗುರವಾಗಿ ಏನೇನು ಟೀಕೆ ಮಾಡುತ್ತಾರೆ ಡಿಸೆಂಬರ್, ನವೆಂಬರ್ ಇವೆಲ್ಲ ಯಾರೂ ಒಪ್ಪುವ ಮಾತಲ್ಲ ಮುಂದೆ ಚುನಾವಣೆಯಾಗಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂದು ಅವಾಗ ನೋಡೋಣ ಎಂದರು.

ಉದ್ಘಾಟನಾ ಪಾಲಿಟಿಕ್ಸ್ : ಬಿಜೆಪಿ ನಾಯಕರು ಕೊಳಕು ರಾಜಕೀಯ ಮಾಡಿದ್ದಾರೆ. ರಾಜಕೀಯ ವಾತಾವರಣ ಕೆಡಿಸುವ ಕೆಲಸ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿರು. ಇವರು ಸಣ್ಣತನದ ರಾಜಕೀಯ ಮಾಡುತ್ತಿದ್ದಾರೆ. ನಾವು ಎಲ್ಲರನ್ನು ಕರೆದು ಬೆಂಗಳೂರಿನಲ್ಲಿ ಇನ್ವೆಸ್ಟ್ ಕರ್ನಾಟಕ ಮಾಡಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ಈ ರೀತಿ ಕೊಳಕು ರಾಜಕೀಯ ಮಾಡುವುದು ಸರಿಯಲ್ಲ. ಇವರು ತಮ್ಮ ಸ್ವಂತ ದುಡ್ಡಿನಲ್ಲಿ ಮಾಡಿದ್ದಲ್ಲ, ಇವರದೇ ಹಣ, ಭೂಮಿ ಆಗಿರುತ್ತಿದ್ದರೆ ಕೇಳುತ್ತಿರಲಿಲ್ಲ. ನಾನೇನು ವರ್ಷಕ್ಕೊಮ್ಮೆ ಬರುವ ಉಸ್ತುವಾರಿ ಅಲ್ಲ, ತಿಂಗಳಲ್ಲಿ ೨-೩ ಬಾರಿ ಮಂಗಳೂರಿಗೆ ಬರುತ್ತೇನೆ. ಒಂದು ಫೋನ್ ಮಾಡಬಹುದಿತ್ತಲ್ವಾ.. ಶಾಸಕನ ನಡೆಯಿಂದ ಮುಜುಗರ ಸೃಷ್ಟಿ ಆಗಿದೆ ಎಂದು ಹೇಳಿದರು.
ಉದ್ಘಾಟನೆಯನ್ನು ಸೂಚಿಸುವ ಕಲ್ಲಿನಲ್ಲೂ ಇವರದೇ ಹೆಸರು ಹಾಕಿದ್ದಾರೆ. ಇಷ್ಟೆಲ್ಲ ಆಗುವಾಗ ಅಧಿಕಾರಿಗಳು ಸುಮ್ಮನಿದ್ರಾ.. ಏನೂ ಗೊತ್ತೇ ಆಗಲಿಲ್ವಾ.. ಯಾಕೆ ನನ್ನ ಗಮನಕ್ಕೆ ತಂದಿಲ್ಲ. ಇದಕ್ಕೆ ಯಾರು ಕಾರಣ ಅಂತ ವರದಿ ಕೊಡಬೇಕು ಎಂದು ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಗೆ ಸೂಚನೆ ನೀಡಿದರು. ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಇಲ್ಲಿನ ಬಿಜೆಪಿ ಶಾಸಕರು ರಾಜಕೀಯದ ಸಣ್ಣತನ ತೋರಿಸಿದ್ದಾರೆ. ಇವತ್ತು ಕೂಡ ನಮ್ಮ ಶಾಸಕರು ಕಾರ್ಯಕ್ರಮಕ್ಕೆ ಬಂದಿಲ್ಲ, ಇದೇನಾ ಇವರು ಸರ್ಕಾರಿ ಕಾರ್ಯಕ್ರಮಕ್ಕೆ ಕೊಡುವ ಗೌರವ ಎಂದು ಪ್ರಶ್ನಿಸಿದರು.

Previous articleಸೇವಾಲಾಲ ಜಯಂತಿ: ಭವ್ಯ ಮೆರವಣಿಗೆ
Next articleಧಾರ್ಮಿಕ ವಿಚಾರದಲ್ಲೂ ರಾಜಕೀಯ ಮಾಡುವವರು ನಿಜವಾದ ಹಿಂದೂಗಳಲ್ಲ