೨೦೨೫ರ ಮೊದಲ ಉದ್ಘಾಟನಾ ಪಂದ್ಯದಲ್ಲಿ ೨೦೦+ಮೊತ್ತವನ್ನು ಹಿಂಬಾಲಿಸಿ ಗುಜರಾತ್ ವಿರುದ್ಧ ಗೆದ್ದು ಬೀಗಿದ ಆರ್ ಸಿ ಬಿ ಮಹಿಳಾ ತಂಡ. ಮೊದಲ ಪಂದ್ಯದಲ್ಲೇ ಹಲವು ದಾಖಲೆಗಳನ್ನು ಬರೆದ ಆರ್ ಸಿಬಿ ಗುಜರಾತ್ ಜೈಂಟ್ಸ್ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಅತಿ ಹೆಚ್ಚು ಸ್ಕೋರ್ ಮಾಡಿ ಗೆದ್ದ ದಾಖಲೆ ಇದೀಗ ಆರ್ ಸಿಬಿಯದ್ದಾಗಿದೆ.
ವಡೋದರಾದ ಕೋಟಂಬಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಆರ್‌ಸಿಬಿ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ 20 ಓವರ್ ಗಳಲ್ಲಿ 5 ವಿಕೆಟ್ ಕಳೆದುಕೊಂಡು 201 ರನ್ ಗಳಿಸಿತು. 202 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಆರ್ ಸಿಬಿ ಆರಂಭದಲ್ಲಿ 14 ರನ್ ಗಳಿಸುವಷ್ಟರಲ್ಲಿ 2 ಪ್ರಮುಖ ವಿಕೆಟ್ ಕಳೆದು ಕೊಂಡಿತು. ಸ್ಮೃತಿ ಮಂಧಾನ 9 ರನ್ ಗಳಿಸಿ ಔಟಾದರೆ, ಡೇನಿಯಲ್ ವ್ಯಾಟ್ 4 ರನ್ ಗಳಿಸಿ ಔಟಾದರು. ಬಳಿಕ ಜೊತೆಯಾದ ಎಲ್ಲಿಸ್ ಪೆರ್‍ರಿ ಮತ್ತು ರಾಘ್ವಿ ಬಿಸ್ಟ್ ತಂಡಕ್ಕೆ ಆಸರೆಯಾದರು. ಮೂರನೇ ವಿಕೆಟ್‌ಗೆ ಈ ಜೋಡಿ 86 ರನ್‌ಗಳನ್ನು ಕಲೆಹಾಕಿತು.ಬಳಿಕ ಜೊತೆಯಾದ ರಿಚಾ ಘೋಷ್ ಮತ್ತು ಕನಿಕಾ ಅಹುಜಾ ಜೋಡಿ ನಾಲ್ಕನೇ ವಿಕೆಟ್‌ಗೆ 93 ರನ್ ಕಲೆಹಾಕಿದರು, ಇನ್ನೂ 9 ಎಸೆತ ಬಾಕಿ ಇರುವಂತೆಯೇ ಆರ್ ಸಿಬಿ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು.
