ಶಿವಮೊಗ್ಗ: ‘ಭದ್ರಾವತಿ ಶಾಸಕರೆ, ನಿಮ್ಮ ದೌರ್ಜನ್ಯ ಮತ್ತು ದಬ್ಬಾಳಿಕೆ ಬಹಳ ದಿನ ನಡೆಯಲ್ಲ’ ಎಂದು ಜೆಡಿಎಸ್‌ನ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಬ್ಬರಿಸಿದ್ದಾರೆ.
ಶುಕ್ರವಾರ ಭದ್ರಾವತಿಯಲ್ಲಿ ಶಾಸಕರ ರಾಜೀನಾಮೆಗೆ ಹಾಗೂ ಪುತ್ರನನ್ನು ಬಂಧಿ ಸುವಂತೆ ಆಗ್ರಹಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ಶಾಸಕರಿಗೆ ಮತ ಹಾಕಿ ಅವರ ಕುಟುಂಬಕ್ಕೆ ತಲೆತಗ್ಗಿಸುವ ಪರಿಸ್ಥಿತಿ ಭದ್ರಾವತಿ ನಾಗರಿಕರಲ್ಲಿದೆ. ಅವರ ಸುಪತ್ರರ ಬಗ್ಗೆ ಕೇಳಿದ್ದೆ. ಆದರೆ ಮೊನ್ನೆ ನಡೆದ ಘಟನೆ ಯಿಂದಾಗಿ ಮಾಧ್ಯಮದ ಮೂಲಕ ಅವರ ಪದ ಬಳಕೆ ಕೇಳಿದ್ದೇನೆ ಎಂದರು.
ಭದ್ರಾವತಿಯಲ್ಲಿ ಹಲವಾರು ಘಟನೆ ನಡೆದಿದೆ. ಅವರ ನಿರಂಕುಶಕ್ಕೆ ಲಗಾಮು ಹಾಕಬೇಕು ಎಂದಾಗ ಅಧಿಕಾರವನ್ನು ಬಳಸಿ ಮುಚ್ಚಿಹಾಕಲು ಯತ್ನ ನಡೆದಿದೆ. ವಿಧಾನ ಪರಿಷತ್‌ನಲ್ಲಿ ಪ್ರಭಾವಿ ಸಚಿವೆಯೊಬ್ಬರಿಗೆ ಅವಾಚ್ಯ ಶಬ್ದ ಬಳಕೆ ಮಾಡ ಲಾಗಿದೆ ಎಂದು ಎಂಎಲ್‌ಸಿಯನ್ನು ಬಂಧಿಸಿ ಠಾಣೆಯಿಂದ ಠಾಣೆಯಿಂದ ಶಿಫ್ಟ್ ಮಾಡಲಾಗುತ್ತಿತ್ತು. ಅವರ ಆಡಿಯೋ ವಿಡಿಯೋವನ್ನ ಎಫ್‌ಎಸ್‌ಎಲ್‌ಗೆ ಕಳು ಹಿಸಲಾಗಿತ್ತು. ಆದರೆ ಅಲ್ಲಿದ್ದ ಧಮ್ಮು ತಾಕತ್ತು ಭದ್ರಾವತಿ ಶಾಸಕರ ಪುತ್ರರ ವಿರುದ್ಧ ಏಕಿಲ್ಲ. ಅವರ ಆಡಿಯೋ ಮತ್ತು ವಿಡಿಯೋವನ್ನು ಎಫ್‌ಎಸ್‌ಎಲ್‌ಗೆ ಕೊಟ್ಟಿಲ್ಲ. ರಾಮನಗರದಲ್ಲಿ ನಿಂತು ಅಬ್ಬರಿಸುವ ಡಿಸಿಎಂ ಇಲ್ಲಿನ ಶಾಸಕನ ಪುತ್ರನ ವಿರುದ್ಧ ಏಕೆ ಮಾತನಾಡುತ್ತಿಲ್ಲ ಎಂದು ಸವಾಲು ಹಾಕಿದ ನಿಖಿಲ್, ಭದ್ರಾವತಿ ಯನ್ನು ಹರಾಜು ಹಾಕಲಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಜನ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಸಿದರು.
ವಿಐಎಸ್‌ಎಲ್ ಕಾರ್ಖಾನೆ ಉಳಿವಿಗೆ ಕ್ರಮ: ವಿಶಾಖಪಟ್ಟಣಂನ ಸ್ಟೀಲ್ ಪ್ಲಾಂಟ್‌ಗೆ ೬ ತಿಂಗಳಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರು ೧೧ ಸಾವಿರ ಕೋಟಿ ಬಿಡುಗಡೆ ಮಾಡಿಸಿ ಪುನಶ್ಚೇತನಗೊಳಿಸಿದ್ದಾರೆ. ಇದರಿಂದ ನೂರಾರು ಕುಟುಂಬದ ಬದುಕು ಹಸನುಗೊಳಿಸಲಾಗುತ್ತಿದೆ. ಇದನ್ನು ನಿರೀಕ್ಷಿಸಿರಲಿಲ್ಲ. ಅದ ರಂತೆ ವಿಐಎಸ್‌ಎಲ್ ಕಾರ್ಖಾನೆ ಮುಚ್ಚಿಹೋಗಿ ವರ್ಷಗಳೆ ಕಳೆದಿವೆ. ಇದರ ಪುನಶ್ಚೇತನಕ್ಕೆ ೧೫ ಸಾವಿರ ಕೋಟಿ ರೂ. ಹಣ ಬೇಕಿದೆ. ಸೇಲಂ ಮತ್ತು ವೈಜಾ ಗ್‌ನ ಪ್ಲಾಂಟ್ ಪುನಶ್ಚೇತನಗೊಳಿಸಿದಂತೆ ಕುಮಾರಸ್ವಾಮಿಯವರು ವಿಐ ಎಸ್‌ಎಲ್ ಪುನರಾರಂಭಕ್ಕೆ ಶ್ರಮಿಸುತ್ತಿದ್ದಾರೆ ಎಂದು ಭರವಸೆ ನೀಡಿದರು.