ಕೈಗೆಟುಕುವ ದರದಲ್ಲಿ 5ಜಿ ಸ್ಮಾರ್ಟ್ ಫೋನ್

5ಜಿ ಜೊತೆಗೆ 4 ಜನರೇಷನ್ ಓಎಸ್ ಅಪ್‌ಗ್ರೇಡ್‌ಗಳು ಮತ್ತು 4 ವರ್ಷಗಳ ಸೆಕ್ಯೂರಿಟಿ ಅಪ್ ಡೇಟ್

ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ ಇಂದು ಭಾರತದಲ್ಲಿ ತನ್ನ ಕೈಗೆಟುಕುವ ದರದ 5ಜಿ ಸ್ಮಾರ್ಟ್‌ಫೋನ್ ಸ್ಯಾಮ್ ಸಂಗ್ ಗ್ಯಾಲಕ್ಸಿ ಎಫ್06 5ಜಿ ಅನ್ನು ಬಿಡುಗಡೆ ಮಾಡಿದೆ.

ಉನ್ನತ ಕಾರ್ಯಕ್ಷಮತೆ ಮತ್ತು ಆಕರ್ಷಕ ವಿನ್ಯಾಸ ಹೊಂದಿರುವ ಗ್ಯಾಲಕ್ಸಿ ಎಫ್06 5ಜಿ ಸ್ಮಾರ್ಟ್ ಫೋನ್ ಅನ್ನು 5ಜಿ ವಿಭಾಗದಲ್ಲಿ ಸಂಚಲನ ಮೂಡಿಸಲು ಸಿದ್ಧಪಡಿಸಲಾಗಿದೆ. ಗ್ಯಾಲಕ್ಸಿ ಎಫ್06 5ಜಿ ಕೈಗೆಟುಕುವ ದರದಲ್ಲಿ 5ಜಿ ಅನುಭವವನ್ನು ಒದಗಿಸಲಿದ್ದು, ಹೆಚ್ಚಿನ ಗ್ರಾಹಕರು 5ಜಿ ತಂತ್ರಜ್ಞಾನವನ್ನು ಲಭ್ಯವಾಗಿಸಲಿದೆ. ವಿಶೇಷವಾಗಿ ದೇಶಾದ್ಯಂತ 5ಜಿ ಅಳವಡಿಕೆಯನ್ನು ವೇಗಗೊಳಿಸಲಿದೆ. ಗ್ಯಾಲಕ್ಸಿ ಎಫ್06 5ಜಿ ಎಲ್ಲಾ ಟೆಲಿಕಾಂ ಆಪರೇಟರ್‌ ಗಳ 12 5ಜಿ ಬ್ಯಾಂಡ್‌ ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ.

ಈ ಕುರಿತು ಮಾತನಾಡಿರುವ ಸ್ಯಾಮ್‌ಸಂಗ್ ಇಂಡಿಯಾದ ಎಂಎಕ್ಸ್ ಬಿಸಿನೆಸ್ ವಿಭಾಗದ ಜನರಲ್ ಮ್ಯಾನೇಜರ್ ಅಕ್ಷಯ್ ಎಸ್ ರಾವ್ ಅವರು, “ಹೊಸ ಕಾಲಕ್ಕೆ ತಕ್ಕಂತೆ ವೇಗದ ಸಂಪರ್ಕ ಹೊಂದಲು ವಿನ್ಯಾಸಗೊಳಿಸಲಾಗಿರುವ ನಮ್ಮ ಕೈಗೆಟುಕುವ ದರದ 5ಜಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ಸಂತೋಷ ಪಡುತ್ತೇವೆ. ಉತ್ತಮ ಕಾರ್ಯಕ್ಷಮತೆ ಮತ್ತು ಸೊಗಸಾದ ವಿನ್ಯಾಸ ಹೊಂದಿರುವ ಗ್ಯಾಲಕ್ಸಿ ಎಫ್06 5ಜಿ ಸ್ಮಾರ್ಟ್ ಫೋನ್ ಲಕ್ಷಾಂತರ ಗ್ರಾಹಕರಿಗೆ ಸಂಪೂರ್ಣ 5ಜಿ ಸೌಲಭ್ಯ ಒದಗಿಸಲಿದೆ. ಗ್ಯಾಲಕ್ಸಿ ಎಫ್06 5ಜಿ ಬಿಡುಗಡೆ ಮಾಡುವ ಮೂಲಕ ನಾವು ಕೇವಲ ಸ್ಮಾರ್ಟ್‌ಫೋನ್ ಅನ್ನು ಮಾತ್ರ ಬಿಡುಗಡೆ ಮಾಡುತ್ತಿಲ್ಲ, ಜೊತೆಗೆ ಪ್ರತಿಯೊಬ್ಬ ಭಾರತೀಯರಿಗೂ ಹೊಸ ಸಾಧ್ಯತೆಗಳನ್ನು ಅನ್ವೇಷಿಸಲು ಅನುವು ಮಾಡಿಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಸಂಪೂರ್ಣ 5ಜಿ ಅನುಭವ: ಗ್ಯಾಲಕ್ಸಿ ಎಫ್06 5ಜಿ ಅನ್ನು ಅದ್ಭುತ ವೇಗದ ಸಂಪರ್ಕವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದ್ದು, ಇದು ಎಲ್ಲಾ ಟೆಲಿಕಾಂ ಆಪರೇಟರ್‌ ಗಳಲ್ಲಿ 12 5ಜಿ ಬ್ಯಾಂಡ್‌ ಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಈ ಫೋನ್ ನಲ್ಲಿ ವೇಗವಾಗಿ ಡೌನ್‌ ಲೋಡ್ ಮತ್ತು ಅಪ್‌ ಲೋಡ್ ಮಾಡಬಹುದಾಗಿದೆ. ಗ್ಯಾಲಕ್ಸಿ ಎಫ್06 5ಜಿ ಸ್ಮಾರ್ಟ್ ಫೋನ್ ನಲ್ಲಿ ಸುಗಮವಾಗಿ ಲೈವ್ ಸ್ಟ್ರೀಮಿಂಗ್ ಮತ್ತು ವೀಡಿಯೊ ಕಾಲ್ ಮಾಡಬಹುದಾಗಿದೆ.

ಆಕರ್ಷಕ ವಿನ್ಯಾಸ ಮತ್ತು ಉತ್ತಮ ಕಾರ್ಯಕ್ಷಮತೆ: ಗ್ಯಾಲಕ್ಸಿ ಎಫ್06 5ಜಿ ಸ್ಮಾರ್ಟ್ ಫೋನ್ ‘ರಿಪ್ಪಲ್ ಗ್ಲೋ’ ಫಿನಿಶ್ ಅನ್ನು ಹೊಂದಿದ್ದು, ಈ ವಿನ್ಯಾಸವು ಸೊಗಸಾಗಿದೆ ಮತ್ತು ಅತ್ಯಾಧುನಿಕವಾಗಿದೆ. ದೂರದಿಂದ ಮಿಂಚುವಂತೆ ಕಾಣುತ್ತದೆ. 800 ನಿಟ್ಸ್ ಬ್ರೈಟ್‌ ನೆಸ್‌ ಹೊಂದಿರುವ 6.7 ಇಂಚಿನ ದೊಡ್ಡ ಹೆಡ್ ಡಿ+ ಡಿಸ್ ಪ್ಲೇ ಹೊಂದಿರುವ ಗ್ಯಾಲಕ್ಸಿ ಎಫ್06 5ಜಿ ಗ್ರಾಹಕರಿಗೆ ಅತ್ಯದ್ಭುತ ದೃಶ್ಯಾವಳಿ ವೀಕ್ಷಿಸಲು ಅನುವು ಮಾಡಿಕೊಡುತ್ತದೆ ಮತ್ತು ಮಂತ್ರಮುಗ್ಧಗೊಳಿಸುವ ವೀಕ್ಷಣಾ ಅನುಭವ ಒದಗಿಸುತ್ತದೆ. ಸ್ಮಾರ್ಟ್‌ ಫೋನ್ 8ಎಂಎಂನಷ್ಟು ಸಪೂರವಾಗಿದೆ ಮತ್ತು ಕೇವಲ 191 ಗ್ರಾಂ ಭಾರವಿದೆ. ಅತ್ಯಾಕರ್ಷಕವಾಗಿ ಕಾಣಿಸುತ್ತದೆ ಮತ್ತು ಬಳಸುವುದಕ್ಕೂ ಖುಷಿಕೊಡುವಂತಿದೆ. ಗ್ಯಾಲಕ್ಸಿ ಎಫ್06 5ಜಿ ಫೋನ್ ಬಹಾಮಾ ಬ್ಲೂ ಮತ್ತು ಲಿಟ್ ವೈಲೆಟ್ ಎಂಬ ಎರಡು ಗಮನ ಸೆಳೆಯುವ ಮತ್ತು ಮೋಡಿಮಾಡುವ ಬಣ್ಣಗಳಲ್ಲಿ ಲಭ್ಯವಿರುತ್ತದೆ.

ಕ್ಯಾಮೆರಾ: ಗ್ಯಾಲಕ್ಸಿ ಎಫ್06 5ಜಿ ಅತ್ಯಾಕರ್ಷಕ ಹೊಸ ಕ್ಯಾಮೆರಾ ಶೈಲಿಯನ್ನು ಹೊಂದಿದೆ. ಎಫ್1.8 ಅಪರ್ಚರ್ ಜೊತೆಗೆ ಹೈ ರೆಸಲ್ಯೂಶನ್ ನ 50 ಎಂಪಿ ವೈಡ್-ಆಂಗಲ್ ಲೆನ್ಸ್ ಹೊಂದಿರುವ ಈ ಫೋನಿನ ಕ್ಯಾಮೆರಾ ಸೊಗಸಾದ ಮತ್ತು ಅಧ್ಭುತ ಡೀಟೇಲಿಂಗ್ ಹೊಂದಿರುವ ಫೋಟೋ ತೆಗೆಯತ್ತದೆ. ಇದರ 2 ಎಂಪಿಯ ಡೆಪ್ತ್-ಸೆನ್ಸಿಂಗ್ ಕ್ಯಾಮೆರಾ ಹೆಚ್ಚು ಸ್ಪಷ್ಟ ಚಿತ್ರಗಳನ್ನು ನೀಡುತ್ತದೆ. 8 ಎಂಪಿ ಫ್ರಂಟ್ ಕ್ಯಾಮರಾ ಚೆಂದದ ಮತ್ತು ಸ್ಪಷ್ಟದ ಸೆಲ್ಫೀಗಳನ್ನು ತೆಗೆಯಲು ಅನುವು ಮಾಡಿಕೊಡುತ್ತದೆ.

ಮಲ್ಟಿ ಟಾಸ್ಕಿಂಗ್ ಮತ್ತು ಗೇಮಿಂಗ್: ಗ್ಯಾಲಕ್ಸಿ ಎಫ್06 5ಜಿ ಸ್ಮಾರ್ಟ್ ಫೋನ್ ಮೀಡಿಯಾ ಟೆಕ್ ಡಿ6300 ಪ್ರೊಸೆಸರ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಇದು 416ಕೆ ವರೆಗಿನ ಅಂಟುಟು ಸ್ಕೋರ್ ಅನ್ನು ಹೊಂದಿರುವ ವಿಭಾಗದಲ್ಲಿಯೇ ಅತ್ಯುತ್ತಮವಾದ ಪ್ರೊಸೆಸರ್‌ ಗಳಲ್ಲಿ ಒಂದಾಗಿದೆ. ವೇಗವಾಗಿ ಕಾರ್ಯನಿರ್ವಹಿಸುತ್ತದೆ. ಸುಲಭವಾಗಿ ಮಲ್ಟಿ ಟಾಸ್ಕಿಂಗ್ ಮಾಡಲು ಅನುವು ಮಾಡಿಕೊಡುತ್ತದೆ. ಗ್ಯಾಲಕ್ಸಿ ಎಫ್06 5ಜಿ ಸ್ಮಾರ್ಟ್ ಫೋನ್ ಉತ್ತಮ ಗುಣಮಟ್ಟದ ಆಡಿಯೋ ಮತ್ತು ದೃಶ್ಯಗಳನ್ನು ಒದಗಿಸುವುದರ ಜೊತೆಗೆ ವೇಗದ ಸಂಪರ್ಕ ಒದಗಿಸುತ್ತಿದ್ದು, ಅದ್ಭುತ ಮೊಬೈಲ್ ಗೇಮಿಂಗ್ ಅನುಭವ ಒದಗಿಸಲಿದೆ.

ಬ್ಯಾಟರಿ ಮತ್ತು ಫಾಸ್ಟ್ ಚಾರ್ಜಿಂಗ್: ಗ್ಯಾಲಕ್ಸಿ ಎಫ್06 5ಜಿ ಸ್ಮಾರ್ಟ್ ಫೋನ್ 5000ಎಂಎಎಚ್ ಬ್ಯಾಟರಿ ಹೊಂದಿದ್ದು, ಈ ಬ್ಯಾಟರಿ ಬ್ರೌಸಿಂಗ್, ಗೇಮಿಂಗ್ ಮತ್ತು ಬಿಂಜ್ ವಾಚಿಂಗ್ ಮಾಡಲು ಸುದೀರ್ಘ ಅವಧಿಯ ಚಾರ್ಜಿಂಗ್ ಅನ್ನು ಒದಗಿಸುತ್ತದೆ. ಗ್ಯಾಲಕ್ಸಿ ಎಫ್06 5ಜಿ ಫೋನ್ ಗ್ರಾಹಕರು ಯಾವುದೇ ಅಡೆತಡೆಯಿಲ್ಲದೆ ಸದಾ ಸಂಪರ್ಕದಲ್ಲಿರಲು, ಮನರಂಜನೆ ಪಡೆಯಲು ಮತ್ತು ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಗ್ಯಾಲಕ್ಸಿ ಎಫ್06 5ಜಿ ವಿಭಾಗದಲ್ಲಿಯೇ ಅತ್ಯುತ್ತಮವಾದ 25 ವಾರ್ಪ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ಹೊಂದಿದ್ದು, ಕಡಿಮೆ ಸಮಯದಲ್ಲಿ ಹೆಚ್ಚು ಚಾರ್ಜ್ ಮಾಡಬಹುದಾಗಿದೆ.

ಗ್ಯಾಲಕ್ಸಿ ಸೌಲಭ್ಯಗಳು: ಸ್ಯಾಮ್‌ ಸಂಗ್ ಗ್ಯಾಲಕ್ಸಿ ಎಫ್06 5ಜಿ ಜೊತೆಗೆ 4 ಜನರೇಷನ್ ಓಎಸ್ ಅಪ್‌ಗ್ರೇಡ್‌ಗಳು ಮತ್ತು 4 ವರ್ಷಗಳ ಸೆಕ್ಯೂರಿಟಿ ಅಪ್ ಡೇಟ್ ಗಳು ದೊರೆಯಲಿವೆ. ಈ ಮೂಲಕ ಕಂಪನಿಯು ಗ್ರಾಹಕರಿಗೆ ತೃಪ್ತಿ ಒದಗಿಸುವ ತನ್ನ ಬದ್ಧತೆಯನ್ನು ಸಾರುತ್ತಿದೆ. ಬಳಕೆದಾರರು ಮುಂಬರುವ ವರ್ಷಗಳಲ್ಲಿ ಹೊಸ ಫೀಚರ್ ಗಳನ್ನು ಮತ್ತು ಹೆಚ್ಚಿನ ಭದ್ರತೆಯನ್ನು ಪಡೆಯುವಂತೆ ನೋಡಿಕೊಳ್ಳುತ್ತಿದೆ.

ಗ್ಯಾಲಕ್ಸಿ ಎಫ್06 5ಜಿ ಸ್ಯಾಮ್‌ ಸಂಗ್‌ ನ ಅತ್ಯಂತ ನವೀನ ಭದ್ರತಾ ಫೀಚರ್ ಗಳಲ್ಲಿ ಒಂದಾಗಿರುವ ಸ್ಯಾಮ್ ಸಂಗ್ ನಾಕ್ಸ್ ವಾಲ್ಟ್ ಅನ್ನು ಹೊಂದಿದೆ. ಈ ಹಾರ್ಡ್‌ವೇರ್ ಆಧರಿತ ಭದ್ರತಾ ವ್ಯವಸ್ಥೆಯು ಹಾರ್ಡ್‌ ವೇರ್ ಮತ್ತು ಸಾಫ್ಟ್‌ ವೇರ್ ದಾಳಿಗಳ ವಿರುದ್ಧ ಸಮಗ್ರ ರಕ್ಷಣೆ ನೀಡುತ್ತದೆ. ಜೊತೆಗೆ ಗ್ಯಾಲಕ್ಸಿ ಎಫ್06 5ಜಿ ಫೋನ್ ಗ್ರಾಹಕರಿಗೆ ಅತ್ಯುತ್ತಮ ಅನುಭವ ಒದಗಿಸಲು ಮುಂದಾಗಿದ್ದು, ಅದಕ್ಕಾಗಿ ವಾಯ್ಸ್ ಫೋಕಸ್ ಫೀಚರ್ ನೀಡಿದೆ. ಈ ಫೀಚರ್ ಬಳಕೆದಾರರಿಗೆ ಸ್ಪಷ್ಟವಾಗಿ ಧ್ವನಿ ಕೇಳಿಸುವಂತೆ ಮಾಡುತ್ತದೆ. ವಾತಾವರಣದಲ್ಲಿರುವ ಶಬ್ದವನ್ನು ಕಡಿತಗೊಳಿಸುತ್ತದೆ. ಜೊತೆಗೆ ಇದರಲ್ಲಿ ಕ್ವಿಕ್ ಷೇರ್ ಫೀಚರ್ ಕೂಡ ಇದ್ದು, ಈ ಫೀಚರ್ ಬಳಕೆದಾರರಿಗೆ ಲ್ಯಾಪ್ ಟಾಪ್, ಟ್ಯಾಬ್ ಸೇರಿದಂತೆ ನಿಮ್ಮ ಯಾವುದೇ ಸಾಧನಗಳಿಗೆ ಅದು ದೂರದಲ್ಲಿದ್ದರೂ ಸರಿಯೇ ಫೈಲ್ ಗಳನ್ನು, ಫೋಟೋಗಳನ್ನು, ಡಾಕ್ಯುಮೆಂಟ್ ಗಳನ್ನು ತ್ವರಿತವಾಗಿ, ಖಾಸಗಿಯಾಗಿ ಷೇರ್ ಮಾಡಲು ಅನುವು ಮಾಡಿಕೊಡುತ್ತದೆ.

ಗ್ಯಾಲಕ್ಸಿ ಎಫ್06 5ಜಿ ಸ್ಮಾರ್ಟ್ ಫೋನ್ ನ ಪರಿಚಯಾತ್ಮಕ ಬೆಲೆ ರೂ. 9499 ಆಗಿದೆ. ಈ ಫೋನ್ ವಿಭಾಗದಲ್ಲಿಯೇ ಅತ್ಯುತ್ತಮವಾದ ಪ್ರೊಸೆಸರ್, ವೇಗದ ಚಾರ್ಜಿಂಗ್ ಸೌಲಭ್ಯ, ವಾಯ್ಸ್ ಫೋಕಸ್ ಫೀಚರ್ ಜೊತೆಗೆ 5ಜಿ ಅನುಭವ ಒದಗಿಸುತ್ತದೆ. ಗ್ಯಾಲಕ್ಸಿ ಎಫ್06 5ಜಿ ವಿಭಾಗದಲ್ಲಿಯೇ ಅತ್ಯುತ್ತಮವಾದ ಸಾಫ್ಟ್‌ ವೇರ್ ಹೊಂದಿದ್ದು, ನಾಲ್ಕು ಜನರೇಷನ್ ಓಎಸ್ ಅಪ್ ಗ್ರೇಡ್ ಮತ್ತು ನಾಲ್ಕು ವರ್ಷಗಳ ಭದ್ರತಾ ಅಪ್ ಡೇಟ್ ಸೌಲಭ್ಯ ಪಡೆಯಬಹುದಾಗಿದೆ.