ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 22, ಶನಿವಾರದಂದು ಆರಂಭ
ಮುಂಬೈ: ಐಪಿಎಲ್‌ನ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 22, ಶನಿವಾರದಂದು ಆರಂಭವಾಗಲಿದೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಮೊದಲ ಪಂದ್ಯವನ್ನು ಆಯೋಜಿಸಲಿದ್ದು, ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮೈದಾನಕ್ಕೆ ಇಳಿಯಲಿದೆ.
ಆರ್‌ಸಿಬಿ, ಗುರುವಾರವಷ್ಟೇ ನೂತನ ನಾಯಕನನ್ನು ಘೋಷಿಸಿದೆ. ಬ್ಯಾಟಿಂಗ್‌ನಲ್ಲಿ ಭರವಸೆ ಮೂಡಿಸಿರುವ ರಜತ್ ಪಾಟೀದಾರ್‌ಗೆ ‘ಮೊದಲ ಕಪ್’ ಗೆದ್ದುಕೊಡುವ ಹೊಣೆ ವಹಿಸಿದೆ. ಜನವರಿ 12 ರಂದು ಮುಂಬೈನಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆ (SGM) ನಂತರ, ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಅವರು ಮಾರ್ಚ್ 23 ರಂದು ಐಪಿಎಲ್ ಪ್ರಾರಂಭವಾಗಲಿದೆ ಎಂದು ಸುಳಿವು ನೀಡಿದ್ದರು ಆದರೆ ಬಿಸಿಸಿಐ ದಿನಾಂಕಗಳನ್ನು ಪರಿಷ್ಕರಿಸಿದೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ, ಶನಿವಾರದಂದು ಋತುವಿನ ಆರಂಭವು ಪ್ರಸಾರಕರ ಕೋರಿಕೆಯಾಗಿತ್ತು, ಇದನ್ನು ಮಂಡಳಿಯು ಪಾಲಿಸಿದೆ. ಪೂರ್ಣ ವೇಳಾಪಟ್ಟಿ ಒಂದು ಅಥವಾ ಎರಡು ದಿನಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.