ಮುಸ್ಲಿಂ ಸದಸ್ಯನಿಂದ ಹನುಮ ಮಾಲಾಧಾರಿಗಳಿಗೆ ಅನ್ನಸಂತರ್ಪಣೆ

0
11

ಕುಷ್ಟಗಿ: ಪುರಸಭೆ ಸದಸ್ಯ ಸೈಯದ್‌ ಮೈನುದ್ದೀನ್‌ ಮುಲ್ಲಾ ಕುಷ್ಟಗಿಯ ಹನುಮ ಮಾಲಾಧಾರಿಗಳಿಗೆ ವಿಶೇಷವಾಗಿ ಅನ್ನಸಂತರ್ಪಣೆ ಮಾಡುವ ಮೂಲಕ ಭಾವೈಕ್ಯತೆ ಮೆರೆದರು.
ಅನ್ನಸಂತರ್ಪಣೆ ಮಾಡಬೇಕೆಂದುಕೊಂಡಿದ್ದೆ. ಇದರಿಂದ ನನಗೆ ಬಹಳ ಸಂತೋಷವಾಗಿದೆ. ಎಲ್ಲಾ ಸಮುದಾಯದವರು ಪ್ರೀತಿ, ವಿಶ್ವಾಸದಿಂದ ಬಾಳಬೇಕು ಎಂದರು.
ಬಸವರಾಜ ಪೂಜಾರ, ಶ್ರೀಧರ್ ತಲೆಕಾನ್, ಸತೀಶ್ ಹಿರೇಮಠ್, ಶರಣು ಕೃಷ್ಣಾಪೂರ, ಅಮರ್ ತುರಕಾಣಿ, ಸತೀಶ, ವೆಂಕಟೇಶ, ಗ್ಯಾನಪ್ಪ, ಬಾಲಾಜಿ, ಶರಣು, ಲಿಂಗರಾಜ ಸೇರದಂತೆ ನೂರಾರು ಹನುಮ ಮಾಲಧಾರಿಗಳು ಅನ್ನಸಂತ್ರಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Previous articleಕೆಲವರು ಬಿಜೆಪಿ ಏಜೆಂಟರ್ ಆಗಿ ವರ್ತಿಸುತ್ತಿದ್ದಾರೆ: ದೀಪಕ ಚಿಂಚೋರೆ
Next articleಭಕ್ತ ಕನಕದಾಸರ ಕಂಚಿನ ಮೂರ್ತಿ ಮೆರವಣಿಗೆ